ಈ ಸಿನಿಮಾ ತೆರೆಗೆ ಬಂದು ಮೂರುವರೆ ದಶಕಗಳಾದರೂ, ಪ್ರತಿ ಪ್ರೇಮಿಯ ಎದೆಯಲ್ಲೂ ಈ ಚಿತ್ರದ ಹಾಡಿನ ಗುನುಗಿದೆ. ಅದರಲ್ಲೂ ಫೆ.14 ರಂದು ಪ್ರಣಯ ಹಕ್ಕಿಗಳ ಪ್ರತಿ ಮೊಬೈಲ್ ನಲ್ಲೂ ಈ ಚಿತ್ರದ ಹಾಡಿನ ಸಾಲಿದೆ. ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಮತ್ತು ಅತ್ಯುತ್ತಮ ಪ್ರೇಮಕಥೆ ಹೊಂದಿರುವ ಚಿತ್ರಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವ ಚಿತ್ರ ‘ಒಲವಿನ ಉಡುಗೊರೆ’. ಇದನ್ನೂ ಓದಿ : ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ
ಈ ಚಿತ್ರಕ್ಕೀಗ 35ರ ಹರೆಯ. ನಿಮ್ಮ ಅತ್ಯುತ್ತಮ ಸಿನಿಮಾಗಳಲ್ಲಿ ನಿಮಗೆ ಇಷ್ಟವಾಗುವ ಚಿತ್ರ ಯಾವುದು ಎಂದು ಅಂಬರೀಶ್ ಅವರನ್ನು ಕೇಳಿದಾಗ, ಕ್ಷಣವೂ ಯೋಚನೆ ಮಾಡಿದೆ ಅವರು ಕೊಡುತ್ತಿದ್ದ ಉತ್ತರ ‘ಒಲವಿನ ಉಡುಗೊರೆ’. ಅನುಮಾನವೇ ಬೇಡ, ಅವರು ಈ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ಅದೆಷ್ಟೋ ಬಾರಿ ಹೇಳಿದ್ದಿದೆ. ಪತ್ನಿ ಸುಮಲತಾ ಅವರ ಜತೆ ಈ ಹಾಡಿಗೆ ಅಂಬರೀಶ್ ಕುಣಿದು, ಟಿಕ್ ಟಾಕ್ ಮಾಡಿದ್ದೂ ಇದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಅಂಬರೀಶ್ ಅವರನ್ನು ಪ್ರಭಾವಿಸಿತ್ತು. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?
Advertisement
1987ರಲ್ಲಿ ತೆರೆಕಂಡ ಒಲವಿನ ಉಡುಗೊರೆ ಚಿತ್ರವು ಆ ಕಾಲಕ್ಕೆ ಪ್ರೇಮಿಗಳ ಫೇವರಿಟ್ ಸಿನಿಮಾವಾಗಿತ್ತು. ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ಪ್ರೇಮಿಗಳು ಅಂಬರೀಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಆಶೀರ್ವಾದ ಪಡೆದ ಉದಾಹರಣೆಗಳಿವೆ. ಈ ಚಿತ್ರದಲ್ಲಿ ಅಂಬರೀಶ್ ಪ್ರೇಮಿಯಾಗಿ ನಟಿಸಿದರೆ, ನಟಿ ಮಂಜುಳಾ ಶರ್ಮಾ ಪ್ರೇಯಸಿಯಾಗಿ ಜನರ ಮನಸ್ಸಲ್ಲಿ ಛಾಪು ಒತ್ತಿದ್ದರು. ಡಿ ರಾಜೇಂದ್ರ ಬಾಬು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಕೇವಲ ಜನರ ಮನಸ್ಸನ್ನು ಮಾತ್ರ ಗೆಲ್ಲಲಿಲ್ಲ. ಬಾಕ್ಸ್ ಆಫೀಸಿನಲ್ಲೂ ಕೊಳ್ಳೆ ಹೊಡೆದಿತ್ತು. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್
Advertisement
ಈ ಸಿನಿಮಾದಲ್ಲಿ ಕಥೆ ಒಂದು ತೂಕವಾದರೆ, ರಂಗರಾವ್ ಸಂಗೀತ ನಿರ್ದೇಶನ ಮತ್ತು ಆರ್.ಎನ್. ಜಯಗೋಪಾಲ್ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಹಾಡುಗಳು ಈ ಚಿತ್ರದ ಗೆಲುವಿಗೆ ನೇರವಾಗಿಯೇ ಕಾರಣವಾಗಿದ್ದವು. ಮೂವತ್ತೈದು ವರ್ಷಗಳ ನಂತರವು ಈ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು’ ಹಾಡು ಇವತ್ತಿಗೂ ಪ್ರೇಮಿಗಳಿಗೆ ನಿತ್ಯಮಂತ್ರ. ಇದನ್ನೂ ಓದಿ : ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್
Advertisement
ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಖ ಸುಟ್ಟುಕೊಳ್ಳುತ್ತಾನೆ. ಈ ಕಾರಣಕ್ಕಾಗಿ ಅವನ ಪ್ರೇಯಸಿ ದೂರವಾಗುತ್ತಾಳೆ. ಇವನ ಬಾಳಲ್ಲಿ ಬರುವ ಪ್ರೇಯಸಿಯ ತದ್ರೂಪ ಸಹೋದರಿ ಆತನ ಬದುಕಿನಲ್ಲಿ ಏನೆಲ್ಲ ಬದಲಾವಣೆ ತರುತ್ತಾಳೆ ಎಂಬ ಸಿಂಪಲ್ ಕಥೆಗೆ ಅದ್ಭುತವಾಗಿ ಚಿತ್ರಕಥೆ ಹೆಣೆಯಲಾಗಿತ್ತು. ಅಂಬರೀಶ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ನಾಯಕಿ ಮಂಜುಳಾ ಶರ್ಮಾ ದ್ವಿಪಾತ್ರ ಮಾಡಿ ಸೈ ಅನಿಸಿಕೊಂಡಿದ್ದರು. ಈ ನಟನೆಗಾಗಿ ಅಂಬಿಗೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಬಂತು. ಅಷ್ಟರ ಮಟ್ಟಿಗೆ ಕಲಾವಿದರು ಪಾತ್ರಗಳೇ ತಾವಾಗಿ ನಟಿಸಿದ್ದರು. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!
Advertisement
ಈ ಸಿನಿಮಾಗೆ 35 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಅಂಬಿ ಪತ್ನಿ ಸುಮಲತಾ ಅಂಬರೀಶ್ ಈ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ. “ಕನ್ನಡದ ಅತ್ಯುತ್ತಮ ಪ್ರೇಮಕಥೆಗಳಲ್ಲಿ ಒಂದಾದ ಒಲವಿನ ಉಡುಗೊರೆ ಸಿನಿಮಾಕ್ಕೆ 35ರ ಸಂಭ್ರಮದಂದು ಅದರ ಹಲವಾರು ಸವಿ ನೆನಪುಗಳು ಕಣ್ಣಮುಂದೆ ಬರುತ್ತಿವೆ. ವೈಯಕ್ತಿಕವಾಗಿ ಅಂಬರೀಶ್ ಅವರ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದ್ದ ಅದು ಸಾರ್ವಕಾಲಿಕ ಶ್ರೇಷ್ಠ ಸಿನೆಮಾಗಳ ಸಾಲಿನಲ್ಲಿದೆ ಎನ್ನುವ ಹೆಮ್ಮೆ ಇದೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ ‘ಅಮರ್’ ಸಿನಿಮಾದಲ್ಲಿ ‘ಒಲವಿನ ಉಡುಗೊರೆ ಕೊಡಲೇನು’ ಹಾಡನ್ನು ಮರು ಬಳಕೆ ಮಾಡಿಕೊಂಡಿದ್ದರು ನಿರ್ದೇಶಕ ನಾಗಶೇಖರ್.