ಧಾರವಾಡ: ವಿಮಾ ಪಾಲಿಸಿ ಚಾಲ್ತಿ ಇದ್ದರೂ ಚಿಕಿತ್ಸೆ ಪಡೆದ ಹಣ ಪಾವತಿಸಲು ನಿರಾಕರಿಸಿದ ಎಸ್‌ಬಿಐ ವಿಮಾ ಕಂಪನಿಗೆ 35 ಸಾವಿರ ರೂ. ದಂಡದೊಂದಿಗೆ 51,350 ರೂ. ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಧಾರವಾಡ (Dharwad) ಜಿಲ್ಲಾ ಗ್ರಾಹಕರ ಆಯೋಗ (District Consumer Commission) ಆದೇಶಿಸಿದೆ.
ಹುಬ್ಬಳ್ಳಿಯ ರಾಜೇಂದ್ರ ಪತ್ತಾರ ಎಂಬವರು ಎಸ್‌ಬಿಐ ವಿಮಾ ಕಂಪನಿಯಲ್ಲಿ (SBI Insurance Company) 10,502 ರೂ.ಗಳ ಪ್ರೀಮಿಯಮ್ ಸಂದಾಯ ಮಾಡಿದ್ದರು. 2019ರ ಜ.25ರಂದು ಮೆಡಿಕ್ಲೇಮ್ ಆರೋಗ್ಯ ಪ್ಲಸ್ ಪಾಲಿಸಿ ಪಡೆದು, ಪ್ರತಿ ವರ್ಷ ಪ್ರೀಮಿಯಮ್ ಹಣ ಪಾವತಿಸಿ ವಿಮೆ ನವೀಕರಿಸುತ್ತಿದ್ದರು. 2021ರ ಅಕ್ಟೋಬರ್‌ನಲ್ಲಿ ರಾಜೇಂದ್ರ ತಮ್ಮ ಮೂತ್ರದೋಷ ನಿವಾರಣೆಗಾಗಿ ಹುಬ್ಬಳ್ಳಿಯ (Hubballi) ಶುಶ್ರುತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಅದಕ್ಕೆ 51,350 ರೂ. ವೆಚ್ಚ ತಗುಲಿತ್ತು. ತನ್ನ ಆರೋಗ್ಯ ಪ್ಲಸ್ ವಿಮಾ ಪಾಲಿಸಿ ಚಾಲ್ತಿ ಇರುವುದರಿಂದ ಆಸ್ಪತ್ರೆಯ ಖರ್ಚು ಭರಿಸುವಂತೆ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್
ಆದರೆ ವಿಮಾ ಕಂಪನಿ 4-5 ವರ್ಷಗಳಿಂದ ದೂರುದಾರರಿಗೆ ಮೂತ್ರ ದೋಷ ಇದ್ದರೂ ಅದನ್ನು ವಿಮೆ ಪಡೆಯುವಾಗ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸದೆ ಮರೆಮಾಚಿದ್ದಾರೆ ಎಂದು ಕಾರಣ ನೀಡಿ, ಕ್ಲೈಮ್ ತಿರಸ್ಕರಿಸಿದ್ದರು. ಈ ಕುರಿತು ರಾಜೇಂದ್ರ ಅವರು, ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಅನ್ನಭಾಗ್ಯ ಗ್ಯಾರಂಟಿ ಗೊಂದಲ- ರಾಜ್ಯದ ರೈತರಿಂದ ಅಕ್ಕಿ ಖರೀದಿಸಲ್ವಾ ಸಿಎಂ?
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಒಂದು ತಿಂಗಳೊಳಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 51,350 ರೂ. ಹಾಗೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ 35 ಸಾವಿರ ರೂ. ಪರಿಹಾರ ಮತ್ತು ಪ್ರಕರಣದ ವೆಚ್ಚ 10 ಸಾವಿರ ರೂ. ಅನ್ನು ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ. ಇದನ್ನೂ ಓದಿ: ಬಿಜೆಪಿಯ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳನ್ನ ತಂದಿದೆ: ದಿನೇಶ್ ಗುಂಡೂರಾವ್