ಲಕ್ನೋ: ಉತ್ತರ ಪ್ರದೇಶದ ಹಲವು ಕಡೆ ನಿರಂತರ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಸುಮಾರು 35 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭಾನುವಾರದಂದು ರಾಜ್ಯದ ವಿವಿಧೆಡೆಯಲ್ಲಿ ಸಿಡಿಲು ಬಡಿದು 35 ಮಂದಿ ಪ್ರಾಣಬಿಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಒಂದೇ ದಿನದಲ್ಲಿ ಕಾನ್ಪುರ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದ ಪರಿಣಾಮ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವನ್ನಪ್ಪ್ದಿದ್ದಾರೆ.
Advertisement
Advertisement
ವರದಿ ಪ್ರಕಾರ ಕಾನ್ಪುರದಲ್ಲಿ 7 ಮಂದಿ ಹಾಗೂ ಫತೇಪುರದಲ್ಲಿ 7 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಝಾನ್ಸಿಯಲ್ಲಿ 5, ಜಾಲೌನ್ ನಲ್ಲಿ 4, ಹಮೀರ್‍ಪುರದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ, ಗಾಜಿಪುರದಲ್ಲಿ 2 ಮತ್ತು ಜಾನ್‍ಪುರದಲ್ಲಿ 1 ಮತ್ತು ಪ್ರತಾಪಗಢದಲ್ಲಿ ಓರ್ವ ವ್ಯಕ್ತಿ ಜೀವಬಿಟ್ಟಿದ್ದಾನೆ.
Advertisement
#UPCM श्री @myogiadityanath ने विभिन्न जनपदों में आकाशीय बिजली गिरने से हुई 9 लोगों की मृत्यु पर गहरा शोक व्यक्त किया। मुख्यमंत्री ने दिवंगत लोगों की आत्मा की शान्ति की कामना की व उनके परिजनों के प्रति संवेदनाएं व्यक्त की और कहा कि इस कठिन घड़ी में @UPGovt पीड़ितों के साथ है।
— CM Office, GoUP (@CMOfficeUP) July 21, 2019
Advertisement
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಡಿಲು ಬಡಿದು ಹಾಗೂ ಹಾವು ಕಚ್ಚಿ ಸಾವನ್ನಪ್ಪಿರುವ ಕುಟುಂಬಕ್ಕೆ ಸಂತಾಪ ಸೂಚಿಸಿ, ರಾಜ್ಯದಲ್ಲಿ ಮಳೆಯಿಂದಾಗಿ ಆಗಿರುವ ಸಾರ್ವಜನಿಕ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಅಷ್ಟೇ ಅಲ್ಲದೆ ಸಿಡಿಲ ಬಡಿತಕ್ಕೆ ಗಾಯಗೊಂಡಿರುವ ಮಂದಿಗೂ ಕೂಡ ಸರ್ಮಪಕವಾಗಿ ಚಿಕಿತ್ಸೆ ಒದಗಿಸಿ. ಸಂತ್ರಸ್ತರಿಗೆ ನೀಡುವ ಪರಿಹಾರ ಕಾರ್ಯದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.