– ಹೊಸ ವರ್ಷಾಚರಣೆಗೆ ಯಾವುದೇ ಹೊಸ ರೂಲ್ಸ್ ಇಲ್ಲ
ಬೆಂಗಳೂರು: ರಾಜ್ಯದಲ್ಲಿ 35 ಜೆಎನ್.1 (JN.1) ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ (Bengaluru) ಹೆಚ್ಚು ಸಂಖ್ಯೆ ಇದ್ದ ಹಾಗೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
Advertisement
ಕೊರೊನಾ ಹೊಸ ರೂಪಾಂತರಿಯಾದ ಜೆಎನ್.1 ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಜಿಲ್ಲಾವಾರು ಮಾಹಿತಿ ನೀಡಲಾಗುತ್ತದೆ. ನಾಳೆ ಸಬ್ ಕಮಿಟಿ ಸಭೆ ಇದೆ. ಅದರಲ್ಲಿ ಈ ಕುರಿತು ಚರ್ಚೆ ಮಾಡಲಾಗುತ್ತದೆ. ತಜ್ಞರ ಜೊತೆ ಉಪ ಸಮಿತಿ ಸಭೆ ಮಾಡಲಾಗುತ್ತದೆ. ಜೆಎನ್.1 ಬಂದ ಬಗ್ಗೆ ಮಾಹಿತಿ ಇತ್ತು. ಅಧಿಕೃತವಾಗಿ ತಿಳಿಯಲು ಮಾತ್ರ ಸ್ಯಾಂಪಲ್ ಕಳುಹಿಸಲಾಗಿತ್ತು. ಸದ್ಯ ಯಾವುದೇ ಮಾರ್ಗಸೂಚಿ ಬರಲ್ಲ. ಇಡೀ ದೇಶದಲ್ಲಿ ಮಾರ್ಗಸೂಚಿ ಜಾರಿ ಇಲ್ಲ. ಜನ ಗುಂಪಾಗಿ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಇರಲ್ಲ. ಪಾಸಿಟಿವ್ ಬಂದವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದರು. ಇದನ್ನೂ ಓದಿ: ದೇವರ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥ – ಓರ್ವ ಮಹಿಳೆ ಸಾವು
Advertisement
Advertisement
ಜೆಎನ್.1 ಬಂದಿದೆ ಅನ್ನೋ ಮಾಹಿತಿ ಇತ್ತು. ಸಿಎಂ ಹೇಳಿದ್ರು, ನಾನು ಹೇಳಿದ್ದೆ, WHO ಕೂಡ ಹೇಳಿತ್ತು. ಹೊಸದಾಗಿ ಗಾಬರಿ ಆಗುವಂತಹದ್ದು ಏನಿಲ್ಲ. ಎಚ್ಚರಿಕೆಯಿಂದ ಇರಿ ಎಂದು WHO ಕೂಡ ಹೇಳಿದೆ. ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರಿಗೆ ಬೇರೆ ಬೇರೆ ರೋಗದ ಜೊತೆ ಸೋಂಕು ಕೂಡ ಇತ್ತು. ಜೆಎನ್.1 ಸೋಂಕಿನ ಬಗ್ಗೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ಜನರು ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸತ್ತವರಲ್ಲಿ ಜೆಎನ್.1 ಪತ್ತೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ 8 ಮಂದಿಯಲ್ಲಿ JN.1 ವೈರಸ್ ಪತ್ತೆ
Advertisement
ರಾಜ್ಯದಲ್ಲಿ 35 ಜೆಎನ್.1 ವೈರಸ್ ಇರುವ ಮಾಹಿತಿ ಇದೆ. ಬಹುತೇಕ ಕೇಸ್‌ಗಳು ಬೆಂಗಳೂರಲ್ಲೇ ಇರುವ ಸಾಧ್ಯತೆಯಿದೆ. ನಾಳೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸಭೆ ಇದೆ. ಸಭೆಯಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ಜಿನೋಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳುಹಿಸಲಾಗಿತ್ತು. ಜೆಎನ್.1 ಕೇಸ್ ಇದೆ ಅನ್ನೋದು ಮೊದಲೇ ಗೊತ್ತಿತ್ತು. ಹೊಸ ವರ್ಷಕ್ಕೆ (New Year) ಎಲ್ಲೂ ಹೊಸ ಮಾರ್ಗಸೂಚಿ ಇಲ್ಲ. ಯಾವುದೇ ರೀತಿ ಗೈಡ್‌ಲೈನ್ಸ್ ಸದ್ಯ ಬಿಟ್ಟಿಲ್ಲ. ನಾಳೆ ಮಧ್ಯಾಹ್ನದ ನಂತರ ಆ ಬಗ್ಗೆ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಯತ್ನಾಳ್
ಸಭೆಯ ಬಳಿಕ ಮುಂದಿನ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸದ್ಯ ಆತಂಕಗೊಳ್ಳುವ ಅಗತ್ಯವಿಲ್ಲ. ಜೆಎನ್.1ರಿಂದಲೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೊಸ ವರ್ಷದ ಆಚರಣೆಗೆ ನಾಳೆಯ ಸಭೆಯ ಬಳಿಕ ತಿಳಿಸುತ್ತೇವೆ. ಸದ್ಯಕ್ಕೆ ಯಾವುದೇ ರೂಲ್ಸ್ ಇಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಳ್ತಿದ್ದಿದ್ದಕ್ಕೆ ರಿಲೇಷನ್‍ಶಿಪ್ ಬೇಡ ಎಂದಿದ್ದೇನೆ: ಕಾರಿಯಪ್ಪ