ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ಮೋದಿ (PM Modi) ಅವರು ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Shivaji Maharaj Statue) ಸೋಮವಾರ (ಆ.26) ಕುಸಿದು ಬಿದ್ದಿದೆ. 2023ರ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ಈ ಭವ್ಯ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.
ಮಾಲ್ವಾನ್‌ನ ರಾಜ್‌ಕೋಟ್ ಕೋಟೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಾಠ ರಾಜನ 35 ಅಡಿ ಉದ್ದದ ಪ್ರತಿಮೆ ಕುಸಿದಿದುಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
Advertisement
Sindhudurg, Maharashtra: The full-sized statue of Chhatrapati Shivaji Maharaj has collapsed. More details are awaited pic.twitter.com/hYK3opSS7M
— IANS (@ians_india) August 26, 2024
Advertisement
ಈ ಬೆನ್ನಲ್ಲೇ ತಜ್ಞರು ಪ್ರತಿಮೆ ಕುಸಿತಕ್ಕೆ ನಿಖರ ಕಾರಣ ತಿಳಿಸಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ, ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಪ್ರತಿಮೆ ಧ್ವಂಸವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೇಶ್ಯೆ ಗೃಹಕ್ಕೆ ಹೋಗಿದ್ದ, ಗರ್ಲ್‌ಫ್ರೆಂಡ್‌ಗೆ ಬೆತ್ತಲೆ ಫೋಟೋ ಕಳಿಸುವಂತೆ ಕೇಳಿದ್ದ – ರೇಪ್ ಆರೋಪಿಯ ಕರಾಳ ಮುಖ ಬಯಲು
Advertisement
ಕಳೆದ ವರ್ಷ ಪ್ರಧಾನಿ ಮೋದಿ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸ್ಥಳೀಯ ಆಡಳಿತಕ್ಕೆ ನಿರ್ವಹಣೆಯ ಹೊಣೆ ವಹಿಸಲಾಗಿತ್ತು. ಸದ್ಯ ಪ್ರತಿಮೆ ಕುಸಿತಕ್ಕೆ ಮಳೆ ಗಾಳಿಯೇ ಕಾರಣವಾ? ಅಥವಾ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯ ಕಾರಣವಾಯ್ತಾ ಅನ್ನೋ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!
Advertisement
आमचं आणि साऱ्या महाराष्ट्राचं आराध्य दैवत असलेल्या छत्रपती शिवाजी महाराजांचा अपमान आम्ही कदापि सहन करणार नाही!
निवडणुका डोळ्यांसमोर ठेवून घाईघाईत बनवलेलं आणि मोदीजींच्या हस्ते उद्धाटन झालेलं छत्रपती शिवरायांचं मालवण इथलं स्मारक आज केवळ ८ महिन्यातच कोसळलं.
मिंधे सरकारची… pic.twitter.com/gHPJFgCliY
— Aaditya Thackeray (@AUThackeray) August 26, 2024
ವಿಪಕ್ಷಗಳಿಂದ ತರಾಟೆ:
ಪ್ರತಿಮೆ ಧ್ವಂಸಗೊಂಡ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಘಟನೆಯ ನಂತರ, ಎನ್‌ಸಿಪಿ (ಎಸ್‌ಪಿ) ಯ ಜಯಂತ್ ಪಾಟೀಲ್, ಶಿವಸೇನಾ (UBT) ಯ ಆದಿತ್ಯ ಠಾಕ್ರೆ ಮತ್ತು ಇತರರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ, ಇದು ಕಳಪೆ ಗುಣಮಟ್ಟದ ಕೆಲಸ ಎಂದು ಆರೋಪಿಸಿದ್ದಾರೆ.
ನಮ್ಮ ಮಹಾರಾಷ್ಟ್ರದ ಆರಾಧ್ಯ ದೈವವಾದ ಛತ್ರಪತಿ ಶಿವಾಜಿ ಮಹಾರಾಜರಿಗೆ ಆದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಚುನಾವಣೆ ಗೆಲ್ಲಲು ಮೋದಿ ಅವರಿಗೆ ಶಿವಾಜಿ ಮಹಾರಾಜರ ಮುಖ ಬೇಕಿತ್ತು. ಅದಕ್ಕಾಗಿ ತರಾತುರಿಯಲ್ಲಿ ಪ್ರತಿಮೆ ಅನಾವರಣಗೊಳಿಸಿದ್ದರು. ಅವರ ದುರಹಂಕಾರದಿಂದಲೇ ಇಂದು ಪ್ರತಿಮೆ ಧ್ವಂಸವಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: J&K Election | ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದ ಸುಖಾಂತ್ಯ – ಎನ್‌ಸಿ 51, ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧೆ