ಹುಬ್ಬಳ್ಳಿ: ಎರಡು ವರ್ಷದ ಹಿಂದೆ ಪ್ರಯಾಣಿಕರೊಬ್ಬರ ಜೊತೆ ಗಲಾಟೆ ಮಾಡಿ 35 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
Advertisement
2019 ರಲ್ಲಿ ಕಾರವಾರದ ಅಡಿಕೆ ಗೋದಾಮಿನ ನೌಕರ ಅಹ್ಮದ್ ತಮ್ಮ ಮಾಲೀಕ ಹೇಳಿದ ಹಾಗೇ ಹುಬ್ಬಳ್ಳಿಯ ದುರ್ಗದ ಬೈಲಿನ ಬಂಗಾರದ ಅಂಗಡಿಯಲ್ಲಿ 35 ಲಕ್ಷ ಹಣವನ್ನು ಪಡೆದು ತಮ್ಮ ಊರಿಗೆ ಬಸ್ ನಲ್ಲಿ ಪ್ರಯಾಣವನ್ನು ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಆತನನ್ನು ಹಿಂಬಾಲಿಸಿ ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈ ಪಾಸ್ ಬಳಿಯ ಟೋಲ್ ಪ್ಲಾಜಾ ಬಳಿಯಲ್ಲಿ ಜಗಳವಾಡಿ ಆತನ ಬಳಿಯಿಂದ 35 ಲಕ್ಷ ರೂಪಾಯಿರುವ ಬ್ಯಾಗನ್ನು ದೋಚಿಕೊಂಡು ಹೋಗಿದ್ದರು.
Advertisement
Advertisement
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಹಳೇ ಹುಬ್ಬಳ್ಳಿ ಪೊಲೀಸರು 2 ವರ್ಷದ ನಂತರ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲ್ಲತ್ ನಗರದ ನಿವಾಸಿಯಾದ ದಾದಾಪೀರ್ ನದಾಫ್, ಖಾಜಾ ದುಖಾನದಾರ, ಯಲ್ಲಾಪುರ ಓಣಿಯ ಇಸಾಕ್ ಅಹ್ಮದ್ ಹಾಗೂ ಮಹ್ಮದ್ ಆಸೀಫ್ ಎಂಬಾತನನ್ನು ಬಂಧಿಸಿದ್ದಾರೆ. ಇನ್‍ಸ್ಪೆಕ್ಟರ್ ಶಿವಾನಂದ್ ಕಮತಗಿ ನೇತೃತ್ವದಲ್ಲಿ ಎರಡು ವರ್ಷ ಹಿಂದೆ ನಡೆದ ಪ್ರಕರಣವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
Advertisement