349 ಪಾಸಿಟಿವ್, 8 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ, 3809 ಮಂದಿಗೆ ಲಸಿಕೆ

Public TV
1 Min Read
Corona

ಬೆಂಗಳೂರು: ಇಂದು ಕರ್ನಾಟಕದಲ್ಲಿ 349 ಮಂದಿಗೆ ಕೊರೊನಾ ಬಂದಿದ್ದು, ಬೆಂಗಳೂರಿನಲ್ಲಿ 210 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ಆಸ್ಪತ್ರೆಯಿಂದ 324 ಜನ ಡಿಸ್ಚಾರ್ಜ್ ಆಗಿದ್ದಾರೆ. 5 ಜನ ಕೊರೊನಾಗೆ ಬಲಿಯಾಗಿದ್ದು, ಇಂದು 3809 ಮಂದಿಗೆ ಲಸಿಕೆ ನೀಡಲಾಗಿದೆ.

408ff77e 21e6 4a61 90ed 232207c61f28

ಇಂದು ಬಾಗಲಕೋಟೆ, ಬೀದರ್, ಚಾಮರಾಜನಗರ, ಹಾವೇರಿ, ಕೋಲಾರ, ಕೊಪ್ಪಳ, ರಾಮನಗರ, ರಾಯಚೂರುನಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,51,600ಕ್ಕೆ ಏರಿಕೆ ಆಗಿದೆ. ಈ ಪೈಕಿ 9,33,421 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,824 ಸಕ್ರಿಯ ಪ್ರಕರಣಗಳಿವೆ.

5ec47f48 f055 4648 984f 1f35d69717b3

ಒಟ್ಟು ಇಲ್ಲಿಯವರೆಗೆ 12,336 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 118 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 1,921 ಆಂಟಿಜನ್ ಟೆಸ್ಟ್, 58,206 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 60,127 ಮಂದಿಗೆ ಪರೀಕ್ಷೆ ಮಾಡಲಾಗಿದೆ.

7e37fa40 53e9 4e15 a4ad b4bddac723f7

ಬೆಂಗಳೂರು ನಗರದಲ್ಲಿ 210 ಮಂದಿಗೆ ಸೋಂಕು ಬಂದಿದೆ. ತುಮಕೂರು 28, ಕಲಬುರಗಿ ಮತ್ತು ಮೈಸೂರು 14, ವಿಜಯಪುರ 12, ಧಾರವಾಡ 11, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಚಿತ್ರದುರ್ಗದ 8 ಮಂದಿಗೆ ಸೋಂಕು ಬಂದಿದೆ. ಒಟ್ಟು 118 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 52, ಕಲಬುರಗಿ 9, ಧಾರವಾಡ 6, ಮೈಸೂರು, ತುಮಕೂರು ಮತ್ತು ಹಾಸನದಲ್ಲಿ 4 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *