ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬ್ರೇಕ್ ಫೇಲ್ ಆದಂತೆ ಕಾಣುತ್ತಿದೆ. ಇಂದು ಒಟ್ಟು 34,047 ಕೇಸ್ ದಾಖಲಾಗಿದ್ದು, 13 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ತಾಂಡವ ಮತ್ತಷ್ಟು ಹೆಚ್ಚಿದ್ದು, ಇಂದು ಬರೋಬ್ಬರಿ 21,071 ಕೇಸ್ ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 19.29% ಕ್ಕೇರಿದೆ.
ಜಿಲ್ಲೆಗಳಲ್ಲೂ ಕೂಡ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಾಸನ, ಮೈಸೂರು ಮತ್ತು ತುಮಕೂರು ಮೂರು ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಕೇಸ್ ದಾಖಲಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982 ರಾಜ್ಯದಲ್ಲಿ ಇಂದು ಒಟ್ಟು 5,902 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 32,20,087 ಮಂದಿಗೆ ಕೊರೊನಾ ಬಂದಿದೆ. 39,83,645 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.03 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 21,071 ಪಾಸಿಟಿವ್ ಕೇಸ್ ದಾಖಲಾದರೆ, 3,978 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 5 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ಶಾಶ್ವತವಾಗಿರಲ್ಲ, ಶೀಘ್ರವೇ ಅಂತ್ಯವಾಗುತ್ತೆ: ಯುಎಸ್ ವೈರಾಣು ತಜ್ಞ
ರಾಜ್ಯದಲ್ಲಿ ಇಂದು ಒಟ್ಟು 37,086 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,76,470 ಸ್ಯಾಂಪಲ್ (ಆರ್ಟಿಪಿಸಿಆರ್ 1,42,652 + 33,818 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಸುಧಾಕರ್
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 136, ಬಳ್ಳಾರಿ 566, ಬೆಳಗಾವಿ 468, ಬೆಂಗಳೂರು ಗ್ರಾಮಾಂತರ 722, ಬೆಂಗಳೂರು ನಗರ 21,071, ಬೀದರ್ 178, ಚಾಮರಾಜನಗರ 146, ಚಿಕ್ಕಬಳ್ಳಾಪುರ 287, ಚಿಕ್ಕಮಗಳೂರು 135, ಚಿತ್ರದುರ್ಗ 184, ದಕ್ಷಿಣ ಕನ್ನಡ 782, ದಾವಣಗೆರೆ 244, ಧಾರವಾಡ 634, ಗದಗ 117, ಹಾಸನ 1,171, ಹಾವೇರಿ 55, ಕಲಬುರಗಿ 562, ಕೊಡಗು 148, ಕೋಲಾರ 552, ಕೊಪ್ಪಳ 80, ಮಂಡ್ಯ 709, ಮೈಸೂರು 1,892, ರಾಯಚೂರು 143, ರಾಮನಗರ 231, ಶಿವಮೊಗ್ಗ 287, ತುಮಕೂರು 1,373, ಉಡುಪಿ 591, ಉತ್ತರ ಕನ್ನಡ 447, ವಿಜಯಪುರ 103 ಮತ್ತು ಯಾದಗಿರಿಯಲ್ಲಿ 33 ಪಾಸಿಟಿವ್ ಪ್ರಕರಣ ದಾಖಲಾಗಿದೆ.