-ರಾಜ್ಯದಲ್ಲಿ 635ಕ್ಕೇರಿದ ಸೋಂಕಿತರ ಸಂಖ್ಯೆ
ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 34 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೇ 21 ಪ್ರಕರಣಗಳು ಬೆಳಕಿಗೆ ಬಂದಿವೆ.
ಇಂದು ಬೆಳಗ್ಗೆ ಬಿಡುಗಡೆಯಾದ ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ 5 ಮಂದಿಗೆ ಸೋಂಕು ತಗುಲಿರೋದು ವರದಿಯಾಗಿತ್ತು. ಸಂಜೆಯ ಬುಲೆಟಿನ್ ನಲ್ಲ 8 ಮಂದಿಗೆ ಸೋಂಕು ತಗುಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದ್ರೆ ದಾವಣಗೆರೆಯ 21 ಸೋಂಕಿತರ ಸಂಖ್ಯೆಯನ್ನು ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ತಿಳಿಸಿಲ್ಲ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, 21 ಮಂದಿಗೆ ಸೋಂಕು ತಗುಲಿರೋದನ್ನು ದೃಢಪಡಿಸಿದ್ದಾರೆ.
Advertisement
Advertisement
ಸೋಂಕಿತರ ವಿವರ:
1. ರೋಗಿ-602: ಕಲಬುರಗಿಯ 13 ಬಾಲಕಿ. ರೋಗಿ-532ರ ಸಂಪರ್ಕ ಹೊಂದಿದ್ದರು.
2. ರೋಗಿ-603: ಕಲಬುರಗಿಯ 54 ಪುರುಷ. ರೋಗಿ-532ರ ಸಂಪರ್ಕದಲ್ಲಿದ್ದರು.
3. ರೋಗಿ-604: ಕಲಬುರಗಿಯ 41 ಪುರುಷ. ತೀವ್ರತರ ಉಸಿರಾಟದ ಸೋಂಕು.
4. ರೋಗಿ-605: ಬಾಗಲಕೋಟೆಯ 68 ವೃದ್ಧ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
5. ರೋಗಿ-606: ಬಾಗಲಕೋಟೆಯ 60 ವೃದ್ಧೆ. ರೋಗಿ-380ರ ದ್ವಿತೀಯ ಸಂಪರ್ಕದಲ್ಲಿದ್ದರು.
6. ರೋಗಿ-607: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ 23 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
7. ರೋಗಿ-608: ಬೆಂಗಳೂರಿನ 34 ವರ್ಷದ ಯುವಕ. ಕಂಟೈನ್‍ಮೆಂಟ್ ಝೋನ್ ವಾರ್ಡ್-135ಕ್ಕೆ ಭೇಟಿ
8. ರೋಗಿ 609: ಕಲಬುರಗಿಯ 35 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ
9. ರೋಗಿ 610: ಕಲಬುರಗಿಯ 78 ವರ್ಷದ ವೃದ್ಧ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
10. ರೋಗಿ-611: ಕಲಬುರಗಿಯ 22 ವರ್ಷದ ಯುವಕ. ಸೋಂಕಿನ ಮೂಲ ಪತ್ತೆಯಾಗಿಲ್ಲ.
11. ರೋಗಿ-612: ಬೆಂಗಳೂರಿನ 45 ವರ್ಷದ ಮಹಿಳೆ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
12. ರೋಗಿ-613: ಬೆಂಗಳೂರಿನ 24 ವರ್ಷದ ಯುವತಿ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
13. ರೋಗ-614: ಬೆಂಗಳೂರಿನ 45 ವರ್ಷದ ಮಹಿಳೆ. ರೋಗಿ ನಂಬರ್ 350ರ ಜೊತೆ ಸಂಪರ್ಕದಲ್ಲಿದ್ದರು.
Advertisement
ಕಲಬುರಗಿಯಲ್ಲಿ ಆರು, ಬಾಗಲಕೋಟೆಯಲ್ಲಿ ಮೂರು, ಬೆಂಗಳೂರಿನ ನಾಲ್ವರಿಗೆ ಮತ್ತು ದಾವಣಗೆರೆಯ 21 ಮಂದಿಗೆ ಸೋಂಕು ತಗುಲಿದೆ.