Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್‌ಡಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್‌ಡಿಕೆ

Bengaluru City

33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್‌ಡಿಕೆ

Public TV
Last updated: March 8, 2026 6:56 pm
Public TV
Share
3 Min Read
HD Kumaraswamy Womens Day
SHARE

– 2032-33ರಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರಬಹುದು
– ಜಿಬಿಎ ಚುನಾವಣೆಯಲ್ಲಿ ಹೆಚ್ಚು ಕಡೆ ಮಹಿಳೆಯರು ಸ್ಪರ್ಧಿಸಬೇಕು ಎಂದು ಕರೆ

ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಿರುವ 33% ಮೀಸಲು ಮುಂದಿನ ದಿನಗಳಲ್ಲಿನ ಸಂಸದೀಯ ವ್ಯವಸ್ಥೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ನನಗೆ ಇರುವ ಮಾಹಿತಿ ಪ್ರಕಾರ, 2032-33ರಲ್ಲಿ ಮಹಿಳಾ ಮೀಸಲಾತಿ (Women’s Reservation) ಅನುಷ್ಠಾನಕ್ಕೆ ಬರಬಹುದು ಎಂದು ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

ನಗರದ ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಭಾಷಣ ಮಾಡಿದರು. ಇದನ್ನೂ ಓದಿ: ಕಲಬುರಗಿ ಅಭಿವೃದ್ಧಿಗೆ 2 ಸಾವಿರ ಕೋಟಿ, ಬಡವರಿಗೆ 2 ಸಾವಿರ ಮನೆ ಹಂಚಿಕೆ: ಡಿಕೆಶಿ

33% ಮಹಿಳಾ ಮೀಸಲಾತಿ ಜಾರಿಗೆ ಬಂದರೆ ವಿಧಾನಸಭೆಯಲ್ಲಿ 75 ಜನ ಮಹಿಳೆಯರೇ ಶಾಸಕಿಯರು ಇರುತ್ತಾರೆ. ಎಲ್ಲ ಪಕ್ಷಗಳ ಮಹಿಳೆಯರು ಮನಸು ಮಾಡಿದರೆ ಮಹಿಳಾ ಮುಖ್ಯಮಂತ್ರಿಯೇ ಆಗಬಹುದು. ಅಂಥ ಅವಕಾಶ ಮೀಸಲಾತಿಯಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ರಾಜಕೀಯಕ್ಕೆ ಎಂಟ್ರಿ – ಜೆಡಿಯು ಪಕ್ಷಕ್ಕೆ ಸೇರ್ಪಡೆ

HD Kumaraswamy Womens Day 1

ನರೇಂದ್ರ ಮೋದಿ ಅವರ ಸಂಕಲ್ಪದಿಂದ ಇವತ್ತು ರಾಷ್ಟ್ರದಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಬರುತ್ತಿದೆ. ಅದರ ಕನಸು ಕಂಡಿದ್ದವರು ದೇವೇಗೌಡರು. ಮಹಿಳೆಯರ ಪರವಾಗಿ ದೇವೇಗೌಡರು ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಈ ರಾಜ್ಯದಲ್ಲಿ ಪ್ರಥಮ ಬಾರಿಗೆ 70% ಮಹಿಳಾ ಶಿಕ್ಷಕರನ್ನು ನೇಮಿಸಿಕೊಂಡಿದ್ದು ದೇವೇಗೌಡರು ಎಂದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬೇಕು, ಸಿಎಂ, ಸಚಿವರು ಏನೂ ಮಾತನಾಡಿಲ್ಲ: ಹೆಚ್.ಎಂ ರೇವಣ್ಣ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ 50%ರಷ್ಟು ನೀಡಿದ್ದು ದೇವೇಗೌಡರು. 1996ರಲ್ಲಿ ದೇವೇಗೌಡರು ಪ್ರಧಾನಿ ಆಗಿ ಹೋದಮೇಲೆ ರಾಜ್ಯಸಭೆಯಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ವಿಧೇಯಕ ಮಂಡಿಸಿದ್ದರು. ಆದರೆ, ಸಮಾಜವಾದಿ ಪಕ್ಷ, ಆರ್‌ಜೆಡಿ ಬೆಂಬಲ ನೀಡದ ಕಾರಣಕ್ಕೆ ಲೋಕಸಭೆಯಲ್ಲಿ ಆ ವಿಧೇಯಕ ಅಂಗೀಕಾರ ಆಗಲಿಲ್ಲ. ಆದರೆ, ದೈವ ಕೃಪೆ ಇತ್ತು. ನಾವು ಇಂದು ಎನ್‌ಡಿಎ ಮೈತ್ರಿಯಲ್ಲಿ ಇದ್ದೇವೆ. ದೇವೇಗೌಡರ ಕನಸನ್ನು ಮೋದಿಯವರು ಲೋಕಸಭೆಯಲ್ಲಿ ನನಸು ಮಾಡಿದರು ಎಂದು ತಿಳಿಸಿದರು. ಇದನ್ನೂ ಓದಿ: ನಕಲಿ ಪೊಲೀಸರನ್ನು ಕಳುಹಿಸಿ ಸ್ನೇಹಿತನ ಮನೆ ರಾಬರಿ – ಸ್ಟ್ಯಾಂಪ್‌ ವೆಂಡರ್ ಅರೆಸ್ಟ್

HD Kumaraswamy Womens Day 3

ಮಹಿಳೆಯರು ಎತ್ತರಕ್ಕೆ ಬೆಳೆಯುವ ಅವಕಾಶವನ್ನು ಮೋದಿ ಅವರು ನೀಡಿದ್ದಾರೆ. ಆದರೆ, ನಿಮ್ಮ ಅಧಿಕಾರವನ್ನು ನಿಮ್ಮ ಮನೆಯವರು ಕಸಿಯುವ ಪರಿಸ್ಥಿತಿ ಬರಬಾರದು ಎಂದು ಮಹಿಳಾ ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಮಂಜಮ್ಮ ಜೋಗತಿಗೆ ನಾರಿ ನಾರಾಯಣಿ ಗೌರವ

ಮಹಿಳೆಯರು ಅಡುಗೆ ಮನೆಗೆ, ದನಕರು ಸಾಕೋದಕ್ಕೆ ಸೀಮಿತ ಅಂತ ಹಿಂದಿನ ದಿನಗಳಲ್ಲಿ ಭಾವಿಸಲಾಗಿತ್ತು. ಆಗ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ಈಗ ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ ತಂತ್ರಜ್ಞಾನ, ಬಾಹ್ಯಾಕಾಶ, ಸೇನೆ, ಉದ್ಯಮ ಸೇರಿದಂತೆ ಎಲ್ಲ ಕಡೆಯೂ ಮಹಿಳೆಯರು ಇದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ – ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ

ಜಿಬಿಎನಲ್ಲಿ 50% ಮಹಿಳಾ ಮೀಸಲಾತಿ ಘೋಷಣೆ ಆಗಿದೆ. 170-180 ಮಹಿಳೆಯರು ಸ್ಪರ್ಧೆ ಮಾಡಬೇಕಾಗುತ್ತದೆ. ನಮ್ಮಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವುದು, ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆಕಾರ್ ಅಡ್ವರ್ಟೈಸಿಂಗ್‌ ಎಂಡಿ ಮಾಲಾ ಮಖೀಜಾಗೆ ನಾರಿ ನಾರಾಯಣಿ ಗೌರವ

HD Kumaraswamy Womens Day 2

ಜಿಬಿಎ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಅದಕ್ಕೆ ಮಹಿಳಾ ಕಾರ್ಯಕರ್ತರು ಸಜ್ಜಾಗಬೇಕು ಎಂದು ಒತ್ತಿ ಹೇಳಿದ ಸಚಿವರು, ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಇಂಥ ವ್ಯವಸ್ಥೆಗೆ ಯಾರು ಕಾರಣ ಅಂತ ನಗರದ ಜನತೆಗೆ ತಿಳಿಸಬೇಕು. ನಮ್ಮ ಪಕ್ಷದ ಮಹಿಳೆಯರು ಸಕ್ರಿಯರಾಗಿ ಕೆಲಸ ಮಾಡಬೇಕು. ನಮ್ಮಿಂದ, ನಮ್ಮ ಮುಖಂಡರಿಂದ ಎಲ್ಲ ಸಹಕಾರ ಸಿಗಲಿದೆ. ಜೆಡಿಎಸ್‌ನಿಂದ ಹೆಚ್ಚಿನ ಮಹಿಳೆಯರು ಸ್ಪರ್ಧಿಸಬೇಕು, ಹೆಚ್ಚಿನ ಮಹಿಳೆಯರು ಗೆದ್ದು ಬರಬೇಕು ಎಂದರು. ಇದನ್ನೂ ಓದಿ: ರಾಷ್ಟ್ರಪತಿಗೆ ನೀರಿಲ್ಲದ ಶೌಚಾಲಯ ಸ್ಥಾಪಿಸಿದ್ದಕ್ಕೆ ಕೆಂಡಾಮಂಡಲ – ದೀದಿ ಸರ್ಕಾರದಿಂದ ವಿವರಣೆ ಕೋರಿದ ಕೇಂದ್ರ

ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಜೆಡಿಎಸ್ ಜಿಬಿಎ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಜವರಾಯಿ ಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮುಂತಾದವರು ಹಾಜರಿದ್ದರು. ಇದನ್ನೂ ಓದಿ: ಟ್ರಂಪ್ ಮೋದಿ ಮೂಗು ಹಿಡಿದುಕೊಂಡು ಕಂಟ್ರೋಲ್ ಮಾಡ್ತಿದ್ದಾನೆ: ಮಲ್ಲಿಕಾರ್ಜುನ ಖರ್ಗೆ

 

TAGGED:bengalurubjpcongressGBA Electionhd kumaraswamyWomens Reservationಕಾಂಗ್ರೆಸ್ಜಿಬಿಎ ಚುನಾವಣೆಬಿಜೆಪಿಬೆಂಗಳೂರುಮಹಿಳಾ ಮೀಸಲಾತಿಹೆಚ್‍ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

chhattisgarh high court 1
Court

ಮನೆಗಳಲ್ಲಿ ಪ್ರಾರ್ಥನಾ ಸಭೆ ನಡೆಸಲು ಪೂರ್ವಾನುಮತಿ ಬೇಡ – ಛತ್ತೀಸ್‌ಗಢ ಹೈಕೋರ್ಟ್

Public TV
By Public TV
3 minutes ago
Narendra Modi Rajanath Singh
Latest

ಪಶ್ಚಿಮ ಏಷ್ಯಾ ಬಿಕ್ಕಟ್ಟು – ದೇಶದಲ್ಲಿ ಇಂಧನ ಭದ್ರತೆ ಪರಿಶೀಲಿಸಲು ಮೋದಿ ಅಧ್ಯಕ್ಷತೆಯಲ್ಲಿಂದು ಭದ್ರತಾ ಸಭೆ

Public TV
By Public TV
23 minutes ago
State Nursing Council Registrar mallu
Bengaluru City

ಬಲವಂತವಾಗಿ ತಬ್ಬಿಕೊಂಡು ಮುತ್ತು, ಅಂಗಾಂಗ ಮುಟ್ಟಿ ದೌರ್ಜನ್ಯ – ರಾಜ್ಯ ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್‌ ಅರೆಸ್ಟ್

Public TV
By Public TV
26 minutes ago
Oracle
Latest

ಅಮೆರಿಕದ ಕಂಪನಿಯಿಂದ ಶಾಕ್‌ – ಭಾರತದಲ್ಲಿ 12,000 ಉದ್ಯೋಗ ಕಡಿತಗೊಳಿಸಿದ ಒರಾಕಲ್

Public TV
By Public TV
53 minutes ago
Narendra Modi
Latest

ಅಸ್ಸಾಂನಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧನೆ ನಿಶ್ಚಿತ: ಪ್ರಧಾನಿ ಮೋದಿ ವಿಶ್ವಾಸ

Public TV
By Public TV
1 hour ago
PM Modi Shivakumar Shri
Districts

ಕರುಣೆ, ವಿನಯದ ಪ್ರತಿರೂಪವಾಗಿ ನಮ್ಮೆಲ್ಲರ ಸ್ಮರಣೆಯಲ್ಲಿ ಸದಾ ಜೀವಂತ – ಶಿವಕುಮಾರ ಶ್ರೀಗಳಿಗೆ ಮೋದಿ ಭಾವಪೂರ್ಣ ನಮನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?