ಬೈರುತ್: ಇಸ್ರೇಲಿ (Israel) ಪಡೆಗಳು ಬೈರುತ್, ಬೆಕಾ ಕಣಿವೆ ಮತ್ತು ಲೆಬನಾನ್‌ನ (Lebanon) ಇತರ ಪ್ರದೇಶಗಳಲ್ಲಿ ಶನಿವಾರ ನಡೆಸಿದ ಕ್ರೂರ ಬಾಂಬ್ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲಿ ವಾಯುದಾಳಿಗಳಿಂದಾಗಿ 195 ಜನರು ಗಾಯಗೊಂಡಿದ್ದಾರೆ. ಶುಕ್ರವಾರದಿಂದ ಬಾಂಬ್ ದಾಳಿಗಳು ಮುಂದುವರಿದಿದ್ದು, ದಕ್ಷಿಣ ಲೆಬನಾನ್‌ನಿಂದ ಸಾವಿರಾರು ಜನರು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್ ಲೀಡರ್ ಟಾರ್ಗೆಟ್!
ಶನಿವಾರದಂದು ಪ್ರಭಾವಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸಾವನ್ನು ಇಸ್ರೇಲ್ ದೃಢಪಡಿಸಿತು. ಕಾರ್ಯಾಚರಣೆ ಹೊಸ ಆದೇಶದಲ್ಲಿ ಅವರು ಶುಕ್ರವಾರ ಬೈರುತ್‌ನಲ್ಲಿ ಸ್ಟ್ರೈಕ್‌ಗಳನ್ನು ಪ್ರಾರಂಭಿಸಿದರು.
ಇರಾನ್ ನಸ್ರಲ್ಲಾ ಹತ್ಯೆಯನ್ನು ಖಂಡಿಸಿದೆ. ಲೆಬನಾನ್ ಮತ್ತು ಇತರ ಪ್ರದೇಶಗಳಲ್ಲಿ ಇಸ್ರೇಲ್ ದಾಳಿಗಳನ್ನು ನಿಲ್ಲಿಸಲು UN ಭದ್ರತಾ ಮಂಡಳಿಯ ಸಭೆಯಲ್ಲಿ ಒತ್ತಾಯಿಸಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಶುಕ್ರವಾರ ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಹಿರಿಯ ಸದಸ್ಯ, ಉಪ ಕಮಾಂಡರ್ ಅಬ್ಬಾಸ್ ನಿಲ್ಫೋರೌಶನ್ ಹತ್ಯೆಯಾಗಿದ್ದರು. ದಾಳಿಯ ನಂತರ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.