ಬೆಂಗಳೂರು: ಸ್ಯಾಂಡಲ್ವುಡ್ ನಟ ವಿನಯ್ ರಾಜ್ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವರನಟ ಡಾ. ರಾಜ್ ಕುಮಾರ್ ಪುತ್ರ ರಾಘವೇಂದ್ರ ರಾಜ್ರವರ ಮುದ್ದಾದ ಮಗ ವಿನಯ್ ರಾಜ್ ಕುಮಾರ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗನ ಹುಟ್ಟುಹಬ್ಬಕ್ಕೆ ರಾಘವೇಂದ್ರ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
Advertisement
ರಾಘವೇಂದ್ರ ರಾಜ್ಕುಮಾರ್ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಡಾ ರಾಜ್ ಕುಮಾರ್ ಹಾಡಿರುವ ಚಿನ್ನ ಎಂದು ನಗುತ್ತಿರು ನನ್ನ ಕಂದ ಬಿಡದಿರು ಎಂಬ ಹಾಡನ ಜೊತೆಗೆ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಹ್ಯಾಪಿ ಬರ್ತ್ ಡೇ ವಿನಯ್ ಮಗನೇ ಎಂದು ಬರೆದುಕೊಂಡಿದ್ದಾರೆ.
Advertisement
Happy birthday Vinumagane ❤️ pic.twitter.com/nWXypx8eWk
— Raghavendra Rajkumar (@RRK_Official_) May 7, 2021
Advertisement
ಅಣ್ಣನ ಹುಟ್ಟು ಹಬ್ಬದ ಪ್ರಯುಕ್ತ ಸಹೋದರ ಯುವರಾಜ್ ಕುಮಾರ್ ಕೂಡ, ಪ್ರೀತಿಯ ಅಣ್ಣನಿಗೆ ಶುಭಾಶಯ ತಿಳಿಸುವ ಮೂಲಕ ವಿನಯ್ ಜೊತೆಗಿರುವ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
ಹುಟ್ಟು ಹಬ್ಬದ ಶುಭಾಶಯಗಳು
Happy Birthday bro ❤️ pic.twitter.com/zBM5WTFXVm
— YuvaRajkumar (@yuva_rajkumar) May 7, 2021
ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ಆಚರಣೆಗೆ ಈ ವರ್ಷ ಕೊರೊನಾ ಬ್ರೇಕ್ ಹಾಕಿದೆ. ಆದರೂ ಅಭಿಮಾನಿಗಳು ಹಾಗೂ ಸ್ನೇಹಿತರು ವಿನಯ್ಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ವಿನಯ್ ರಾಜ್ ಕುಮಾರ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿದೆ.