ಶಿಮ್ಲಾ: ಈ ವರ್ಷ ಜೂನ್ ತಿಂಗಳಲ್ಲಿ ಹಿಮಾಚಲ ಪ್ರದೇಶದ (Himachal Pradesh) ರಾಜಧಾನಿಯಲ್ಲಿ 324.9 ಮಿಮೀ ಮಳೆ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲೇ ಜೂನ್ (June) ತಿಂಗಳಲ್ಲಿ ಶಿಮ್ಲಾದಲ್ಲಿ (Shimla) ಸುರಿದ 2ನೇ ದಾಖಲೆಯ ಮಳೆಯಾಗಿದೆ (Rain) ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2008ರ ಜೂನ್‌ನಲ್ಲಿ ಶಿಮ್ಲಾದಲ್ಲಿ 570.2 ಮಿಮೀ ಮಳೆಯಾಗಿತ್ತು.
ಮುಂದಿನ 2 ದಿನಗಳಲ್ಲಿ ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್‌ನಂತಹ ಉಳಿದ ದೇಶದ ಭಾಗಗಳಲ್ಲಿ ನೈಋತ್ಯ ಮುಂಗಾರಿನ ಪ್ರಭಾವ ಇರಲಿದೆ. ವಾಯುವ್ಯ, ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಮಾನ್ಸೂನ್‌ನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್
Advertisement
Advertisement
ಹವಾಮಾನ ಇಲಾಖೆ ಗುರುವಾರ ಉತ್ತರಾಖಂಡದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ಮುಂದಿನ 2 ದಿನಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದಿದೆ. ಈ ನಡುವೆ ಮುಂದಿನ 4 ದಿನಗಳಲ್ಲಿ ಗೋವಾ, ಗುಜರಾತ್ ಹಾಗೂ ಮಹಾರಾಷ್ಟ್ರದ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಎರಡು ಮದ್ಯದ ಬಾಟಲ್ ಕೊಂಡೊಯ್ಯಲು ಅನುಮತಿ
Advertisement
Web Stories