– 120 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ
– ಬೆಂಗಳೂರಿನಲ್ಲಿ 107 ಮಂದಿಗೆ ಸೋಂಕು
ಬೆಂಗಳೂರು: ಇಂದು ಕರ್ನಾಟಕದಲ್ಲಿ 322 ಮಂದಿಗೆ ಸೋಂಕು ಬಂದಿದ್ದು ಬೆಂಗಳೂರಿನಲ್ಲಿ 107 ಮಂದಿಗೆ ಕೊರೊನಾ ಬಂದಿದೆ. ಇಂದಿನ ವರದಿಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದ್ದು, 3,563 ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 274 ಮಂದಿ ಬಿಡುಗಡೆಯಾಗಿದ್ದು, ಒಟ್ಟು ಇಲ್ಲಿಯವರೆಗೆ 6,004 ಮಂದಿ ಬಿಡುಗಡೆಯಾಗಿದ್ದಾರೆ.
ಇಂದು 8 ಮಂದಿ ಸೇರಿ ರಾಜ್ಯದಲ್ಲಿ 150 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 274 ಸೋಂಕಿತರ ಪೈಕಿ 64 ಮಂದಿ ಅಂತರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ 5 ಮಂದಿ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಸೋಮವಾರ ಐಸಿಯುನಲ್ಲಿ 80 ಮಂದಿ ಇದ್ದರೆ ಇಂದಿನ ವರದಿಯಲ್ಲಿ ಈ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು ನಗರ 107, ಬಳ್ಳಾರಿ 53, ಬೀದರ್ 22, ಮೈಸೂರು 21, ವಿಜಯಪುರ 16, ಯಾದಗಿರಿ 13, ಉಡುಪಿ 11, ಗದಗ 9, ದಕ್ಷಿಣ ಕನ್ನಡ 8, ಕೋಲಾರ 8, ಹಾಸನ 7, ಕಲಬುರಗಿ 6, ಚಿಕ್ಕಬಳ್ಳಾಪುರ 5, ಶಿವಮೊಗ್ಗ5, ಧಾರವಾಡ 4, ತುಮಕೂರು 4, ಕೊಪ್ಪಳ 4, ಚಾಮರಾಜನಗರ 4, ರಾಯಚೂರು 3, ಉತ್ತರ ಕನ್ನಡ 3, ಮಂಡ್ಯ 2, ಬೆಳಗಾವಿ 2, ದಾವಣಗೆರೆ 2, ಹಾವೇರಿ 2, ಕೊಡಗಿನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಕಲಬುರಗಿ 48, ಬೀದರ್ 42, ರಾಯಚೂರು 36, ಬಳ್ಳಾರಿ 33, ಯಾದಗಿರಿ 30, ಬೆಂಗಳೂರು ನಗರ 24, ಮಂಡ್ಯ 13, ಧಾರವಾಡ 8, ಉತ್ತರ ಕನ್ನಡ 6, ಹಾಸನ 6, ದಾವಣಗೆರೆ 6, ಶಿವಮೊಗ್ಗ 3, ದಕ್ಷಿಣ ಕನ್ನಡ 2, ವಿಜಯಪುರ 2, ಹಾವೇರಿಯಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.