ಮುಂಬೈ: ಟೀಂ ಇಂಡಿಯಾ ಹಾಗೂ ವಿಂಡೀಸ್ ನಡುವಿನ 2ನೇ ಏಕದಿನ ಪಂದ್ಯ ರೋಚಕ ಟೈ ಆದ ಬೆನ್ನಲ್ಲೇ ಭಾರತ ತಂಡಕ್ಕೆ 321 ರನ್ ಅಪಶಕುನವೇ ಎಂಬ ಚರ್ಚೆ ಆರಂಭವಾಗಿದೆ. ಪ್ರತಿಬಾರಿ ಟೀಂ ಇಂಡಿಯಾ 321 ರನ್ ಗಳಿಸಿದ ವೇಳೆ ಉತ್ತಮ ಪ್ರದರ್ಶನ ನಡುವೆಯೂ ಕಾಕತಾಳೀಯ ಎಂಬಂತೆ ಅಘಾತ ಎದುರಿಸಿದೆ.
ಹೈದರಾಬಾದ್‍ನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ವಿಂಡೀಸ್ ವಿರುದ್ಧದ 2ನೇ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲುಕಂಡಿತ್ತು.
Advertisement
Advertisement
2007ರಲ್ಲಿ ಚಂಡೀಗಢದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 321 ರನ್ ಗಳಿಸಿ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಅಲ್ಲದೇ ಈ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ 99 ರನ್ ಗಳಿಸಿ ನರ್ವಸ್ ನೈಂಟಿಗೆ ಔಟಾಗಿದ್ದರು. ಭಾರತ ಮೊತ್ತಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಯುಸೂಫ್ ಖಾನ್ ಭರ್ಜರಿ ಶತಕದ ನೆರವಿನಿಂದ ಜಯ ಗಳಿಸಿತ್ತು.
Advertisement
Advertisement
ಕಳೆದ ವರ್ಷ ಅಂದರೆ 2017 ಲಂಡನ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟೋಫಿ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ 321 ರನ್ ಸಿಡಿಸಿತ್ತು. ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ ಶಿಖರ್ ಧವನ್ 128 ಎಸೆತಗಳಲ್ಲಿ 125 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ ಪಂದ್ಯದಲ್ಲಿ ರೋಹಿತ್ ಶರ್ಮಾ 78 ರನ್, ಧೋನಿ 63 ರನ್ ಸಿಡಿಸಿ ಅರ್ಧ ಶತಕ ಗಳಿಸಿದ್ದರು. ಆದರೆ ಲಂಕಾ ತಂಡ 48.4 ಓವರ್ ಗಳಲ್ಲಿ ಸುಲಭವಾಗಿ ಗುರಿಯನ್ನು ತಲುಪಿತ್ತು.
ವಿಂಡೀಸ್ ವಿರುದ್ಧ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಔಟಾಗದೇ 157 ರನ್ ಸಿಡಿಸಿದ ಬಳಿಕವೂ ಗೆಲುವು ನಿರೀಕ್ಷೆಯಂತೆ ಸಿಗಲಿಲ್ಲ. ಟೀಂ ಇಂಡಿಯಾ ಪರ ಉತ್ತಮ ಹೋರಾಟ ನಡೆಸಿದ ವಿಂಡೀಸ್ ಬ್ಯಾಟ್ಸ್‍ಮನ್ ಗಳು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಇತ್ತ ವಿರಾಟ್ ಕೊಹ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‍ನಲ್ಲಿ 10 ಸಾವಿರ ರನ್ ಪೂರೈಸಿ ಹಲವು ದಾಖಲೆ ಬರೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv