ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಮುಖಗೊಂಡಿದೆ. ಒಟ್ಟು 3,202 ಒಟ್ಟು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 38 ಮರಣ ಪ್ರಕರಣ ದಾಖಲಾಗಿದೆ.
ಪಾಸಿಟಿವಿಟಿ ರೇಟ್ 2.95%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 38,747ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 1,293 ಹೊಸ ಕೇಸ್ ಪತ್ತೆಯಾಗಿದ್ದು, 10 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು
ರಾಜ್ಯದಲ್ಲಿ ಒಟ್ಟು 8,988 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,24,297 ಮಂದಿಗೆ ಕೊರೊನಾ ಬಂದಿದೆ. ಒಟ್ಟು 38,45,903 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.18% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 1,12,406 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,08,534 ಸ್ಯಾಂಪಲ್ (ಆರ್ಟಿಪಿಸಿಆರ್ 81,798 + 26,736 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ – ಶವವಾಗಿ ಪತ್ತೆ!
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 40, ಬಳ್ಳಾರಿ 126, ಬೆಳಗಾವಿ 250, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 1,293, ಬೀದರ್ 23, ಚಾಮರಾಜನಗರ 62, ಚಿಕ್ಕಬಳ್ಳಾಪುರ 50, ಚಿಕ್ಕಮಗಳೂರು 21, ಚಿತ್ರದುರ್ಗ 91, ದಕ್ಷಿಣ ಕನ್ನಡ 62, ದಾವಣಗೆರೆ 19, ಧಾರವಾಡ 69, ಗದಗ 38, ಹಾಸನ 60, ಹಾವೇರಿ 19, ಕಲಬುರಗಿ 43, ಕೊಡಗು 99, ಕೋಲಾರ 32, ಕೊಪ್ಪಳ 18, ಮಂಡ್ಯ 42, ಮೈಸೂರು 197, ರಾಯಚೂರು 22, ರಾಮನಗರ 20, ಶಿವಮೊಗ್ಗ 155, ತುಮಕೂರು 142, ಉಡುಪಿ 67, ಉತ್ತರ ಕನ್ನಡ 62, ವಿಜಯಪುರ 54 ಮತ್ತು ಯಾದಗಿರಿಯಲ್ಲಿ 5 ಪಾಸಿಟಿವ್ ಪ್ರಕರಣ ದಾಖಲಾಗಿದೆ.