ಇಸ್ಲಾಮಾಬಾದ್: ಪಾಕಿಸ್ತಾನ (Pakistan) ಭೀಕರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ನಡುವೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿದೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸದೊಂದು ಫೋಟೋಗಳು ಹರಿದಾಡಿವೆ. ಬರೋಬ್ಬರು 32 ಸಾವಿರ ದ್ಯೋಗ ಆಕಾಂಕ್ಷಿಗಳು ಪೊಲೀಸ್ ಕಾನ್‌ಸ್ಟೇಬಲ್ (Police Constable) ಹುದ್ದೆಯ ನೇಮಕಾತಿಗಾಗಿ ಲಿಖಿತ ಪರೀಕ್ಷೆ (Recruitment Test) ಬರೆಯಲು ಕ್ರೀಡಾಂಗಣದಲ್ಲಿ (Stadium) ಪೆನ್ನು, ಪೇಪರ್ ಹಿಡಿದು ಕುಳಿತಿರುವುದು ಕಂಡುಬಂದಿದೆ.
ಶನಿವಾರ ಇಸ್ಲಾಮಾಬಾದ್‌ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ನಡೆದಿದ್ದು, ಸುಮಾರು 32 ಸಾವಿರ ಅಭ್ಯರ್ಥಿಗಳು ಸ್ಟೇಡಿಯಂನ ನೆಲದ ಮೇಲೆ ಕುಳಿತು ಪರೀಕ್ಷೆ ಬರೆದಿದ್ದಾರೆ.
Advertisement
Advertisement
ವರದಿಗಳ ಪ್ರಕಾರ ಪಾಕಿಸ್ತಾನದಾದ್ಯಂತ 1,667 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ಖಾಲಿಯಿದೆ. ಇದಕ್ಕಾಗಿ ಲಿಖಿತ ಪರೀಕ್ಷೆ ನೀಡಲು ಜಾಹೀರಾತು ನೀಡಲಾಗಿತ್ತು. ಈ ಹಿನ್ನೆಲೆ 30 ಸಾವಿರಕ್ಕೂ ಹೆಚ್ಚಿನ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕಳೆದ 5 ವರ್ಷಗಳಿಂದ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು ಖಾಲಿ ಉಳಿದಿವೆ ಎನ್ನಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಭಾರತೀಯ ವಿದ್ಯಾರ್ಥಿ ಸಾವು – ಶವ ತರಿಸಿಕೊಳ್ಳಲು ಸಹಾಯ ಕೋರಿದ ಕುಟುಂಬಸ್ಥರು
Advertisement
Advertisement
ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಸರ್ಕಾರಿ ಉದ್ಯೋಗಕ್ಕೆ ಅತ್ಯಂತ ಕಡಿಮೆ ನೇಮಕಾತಿ ಮಾಡಿಕೊಳ್ಳುವುದರಿಂದ ನಿರುದ್ಯೋಗಿಳ ಸಂಖ್ಯೆಯೂ ಹೆಚ್ಚಾಗಿದೆ. ಸರ್ಕಾರಿ ವಲಯದಲ್ಲಿ ಖಾಲಿಯಿರುವ ಕೆಲವೇ ಕೆಲವು ಹುದ್ದೆಗೆ ಲಕ್ಷಾಂತರ ಆಕಾಂಕ್ಷಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಭೂತ ಬಿಡಿಸುವ ನೆಪದಲ್ಲಿ 14ರ ಬಾಲಕಿಯ ಮೇಲೆ ಅತ್ಯಾಚಾರ