ಮುಂಬೈ: ಜನರು ಸಾಮಾನ್ಯವಾಗಿ ಭೂಮಿಯ ಮೇಲೆ ಏನೇನೋ ತಿಂದು ಬದುಕುವುದನ್ನು ನೋಡಿದ್ದೇವೆ. ಆದರೆ ಮಹಾರಾಷ್ಟ್ರದಲ್ಲಿ ವ್ಯಕ್ತಿಯೋರ್ವ 32 ವರ್ಷಗಳಿಂದ ಕಲ್ಲು ತಿಂದು ಜೀವಿಸುತ್ತಿದ್ದಾನೆ.
ಹೌದು. ಮಹಾರಾಷ್ಟ್ರದ ಸತ್ರಾ ಜಿಲ್ಲೆಯ ಅಡಾರ್ಕಿ ಖುರ್ದಾ ಗ್ರಾಮದ ನಿವಾಸಿ ರಾಮ್‍ದಾಸ್ ಬೊಡ್ಕ್(78) ಆಹಾರದ ಬದಲಿಗೆ ಪ್ರತಿ ದಿನ 250 ಗ್ರಾಂ ಕಲ್ಲನ್ನು ಆಹಾರವಾಗಿ ತಿಂದು ಜೀವನ ನಡೆಸುತ್ತಿದ್ದಾನೆ.
Advertisement
Advertisement
ಹಲವು ವರ್ಷಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಮ್‍ದಾಸ್ ಸಾಕಷ್ಟು ಬಾರಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ ಹಳ್ಳಿಯ ಹಿರಿಯ ಮಹಿಳೆಯೊಬ್ಬರು ಕಲ್ಲು ತಿನ್ನುವಂತೆ ಸಲಹೆ ನೀಡಿದ್ದರು. ಮಹಿಳೆ ಹೇಳಿದ್ದನ್ನು ಆಲಿಸಿ ರಾಮ್‍ದಾಸ್ ಕಲ್ಲು ಸೇವಿಸಲು ಆರಂಭಿಸಿದ್ದಾನೆ.
Advertisement
ಇತ್ತೀಚಿಗೆ ರಾಮ್‍ದಾಸ್ ಕಲ್ಲು ತಿನ್ನುವ ಫೋಟೋ ವೈರಲ್ ಆಗಿದ್ದು, ಎಲ್ಲಾ ಕಡೆ ಬಾರಿ ಸದ್ದು ಮಾಡುತ್ತಿದೆ. ಅಲ್ಲದೆ ಈತನ ಮನೆಯವರು ಕಲ್ಲು ಸೇವಿಸುವುದನ್ನು ನಿರಾಕರಿಸಿದ್ದರಿಂದ ಅವರಿಗೆ ತಿಳಿಯದಂತೆ ಕಲ್ಲುಗಳನ್ನು ತಿನ್ನುತ್ತಾನೆ. ರಾಮ್‍ದಾಸ್ ಕಲ್ಲು ಸೇವಿಸುವ ಅಭ್ಯಾಸವನ್ನು ವೈದ್ಯರು ಮಾನಸಿಕ ರೋಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.