ಬೆಂಗಳೂರು: ಸೋಂಕಿತರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದ್ದು ಇಂದು 3,146 ಮಂದಿಗೆ ಸೋಂಕು ಬಂದಿದ್ದರೆ 7,384 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 55 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8,12,784ಕ್ಕೆ ಏರಿಕೆಯಾಗಿದೆ. ಈ ಪೈಕಿ 68,161 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 7,33,558 ಮಂದಿ ಬಿಡುಗಡೆಯಾಗಿದ್ದಾರೆ. ಮಂಗಳವಾರ 3,691 ಸೋಮವಾರ 3,130, ಭಾನುವಾರ 4,439 ಮಂದಿಗೆ ಸೋಂಕು ಬಂದಿತ್ತು.
ಒಟ್ಟು ಇಲ್ಲಿಯವರೆಗೆ 11,046 ಮಂದಿ ಮೃತಪಟ್ಟಿದ್ದು, ಸದ್ಯ 939 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 24,256 ಆಟಿಂಜನ್ ಟೆಸ್ಟ್ ಆರ್‌ಟಿಪಿಸಿಆರ್ ಮತ್ತು ಇತ್ಯಾದಿ 61,898 ಪರೀಕ್ಷೆ ಸೇರಿ ಒಟ್ಟು 86,154 ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 76,00,348 ಕೋವಿಡ್ 19 ಪರೀಕ್ಷೆ ಮಾಡಲಾಗಿದೆ.
ಎಂದಿನಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1,612, ಮೈಸೂರು 169, ತುಮಕೂರು 129, ಹಾಸನ 127, ದಕ್ಷಿಣ ಕನ್ನಡದಲ್ಲಿ 99 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿ ಒಟ್ಟು 939 ಮಂದಿ ಇದ್ದು, ಈ ಪೈಕಿ ಬೆಂಗಳೂರಿನಲ್ಲಿ 416, ಬಳ್ಳಾರಿ 61, ಹಾಸನ 44, ಚಾಮರಾಜನಗರದಲ್ಲಿ 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.