– 3 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಉದ್ಯಮಿ
ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಾನ್ಪುರ (Kanpur) ಜಿಲ್ಲೆಯ ಉದ್ಯಮಿ (Businessman) ಉಗ್ರರ ಗುಂಡಿಗೆ ಬಲಿಯಾಯಾಗಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಮದುವೆಯಾಗಿದ್ದವ (Marriage) ಉದ್ಯಮಿ ಶಂಭು ದ್ವಿವೇದಿ (31) ಪತ್ನಿಯೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಇಂದು (ಬುಧವಾರ) ಕಾನ್ಪುರದಲ್ಲಿರುವ ತಮ್ಮ ಮನೆಗೆ ಹಿಂದಿರುಗಬೇಕಿತ್ತು. ದುರದೃಷ್ಟವಶಾತ್ ಉಗ್ರರ ಗುಂಡಿಗೆ ಬಲಿಯಾಗಿ ಶಂಭು ದ್ವಿವೇದಿ ಅವರ ಶವ ಮನೆಗೆ ಹಿಂದಿರುಗುತ್ತಿದೆ. ಹೀಗಾಗಿ ಕಾನ್ಪುರ ಜಿಲ್ಲೆಯ ಮಹಾರಾಜಪುರ ಪ್ರದೇಶದಲ್ಲಿರುವ ಹಾಥಿಪುರ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಇದು ರಾಜಕೀಯ ಮಾಡುವ ಸಮಯವಲ್ಲ, ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ: ಮಲ್ಲಿಕಾರ್ಜುನ ಖರ್ಗೆ
ಕಾನ್ಪುರ ಪೊಲೀಸ್ ಆಯುಕ್ತರಾದ ಜಿತೇಂದ್ರ ಪ್ರತಾಪ್ ಸಿಂಗ್, ಗ್ರಾಮಕ್ಕೆ ತಲುಪಿ, ದ್ವಿವೇದಿ ಅವರ ಕುಟುಂಬವನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲಿದೆ ಎಂದು ಭರವಸೆಯನ್ನೂ ನೀಡಿದ್ದಾರೆ. ಸಿಎಂ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದರು. ಅಲ್ಲದೇ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ಸಿಗುವಂತೆ ನೋಡಿಕೊಳ್ಳಲು ನಮಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ನೆನೆದು ಸಿಎಂ ಯೋಗಿ ಆದಿತ್ಯನಾಥ್ ಸಹ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಪ್ರಪಂಚಕ್ಕೇ ದೊಡ್ಡ ಆಘಾತ, ಇಂತಹ ಉಗ್ರ ಸಂಘಟನೆಗಳನ್ನು ಸದೆಬಡೆಯಬೇಕು – ಡಿಕೆಶಿ
ಕಳೆದ ವಾರವಷ್ಟೇ ದ್ವಿವೇದಿ ತಮ್ಮ ಪತ್ನಿ ಹಾಗೂ ಇತರ 9 ಮಂದಿ ಕುಟುಂಬ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಬುಧವಾರ (ಇಂದು) ಹಿಂದಿರುಗಬೇಕಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕುದುರೆ ಸವಾರಿ ಮಾಡಲು ಮುಂದಾಗಿದ್ದರು, ಅಷ್ಟರಲ್ಲೇ ಅಲ್ಲಿಗೆ ಬಂದ ಉಗ್ರರು ಪತ್ನಿಯ ಮುಂದೆಯೇ ದ್ವಿವೇದಿ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್ಡಕುಸಿತವಾಗಿದ್ದಕ್ಕೆ ಬಚಾವ್ – ಪಹಲ್ಗಾಮ್‌ಗೆ ಹೋಗಬೇಕಿದ್ದ 13 ಕನ್ನಡಿಗರು ಅದೃಷ್ಟವಶಾತ್ ಪಾರು