ಹೈದರಾಬಾದ್: ಹೈದರಾಬಾದ್ ನೆಹರು ಝೂಲಾಜಿಕಲ್ ಪಾರ್ಕ್‍ನಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಆಫ್ರಿಕನ್ ಸಿಂಹಗಳ ಆವರಣಕ್ಕೆ ನುಗ್ಗಿದ್ದು, ಭಾರೀ ದುರಂತವೊಂದು ಕೂದಲೆಳೆಯಲ್ಲಿ ತಪ್ಪಿದೆ.
ಆಫ್ರಿಕನ್ ಸಿಂಹಗಳ ಗುಹೆಗೆ ನುಗ್ಗಿದ ವ್ಯಕ್ತಿಯನ್ನು ಜಿ.ಸಾಯಿಕುಮಾರ್ (31) ಎಂದು ಗುರುತಿಸಲಾಗಿದೆ. ಈತ ಆಫ್ರಿಕನ್ ಸಿಂಹಗಳ ಆವರಣಕ್ಕೆ ನುಗ್ಗಿದ್ದನು. ಸಿಂಹವೊಂದು ಈತನ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲಿ ಇದನ್ನು ಗಮನಿಸಿದ ಸಿಬ್ಬಂದಿ ಈತನನ್ನು ರಕ್ಷಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ
Advertisement
#WATCH | Telangana: A 31-year-old man who went close to an African lion moat area at Nehru Zoological Park in Hyderabad was rescued by the zoo authorities and handed over to police earlier today pic.twitter.com/Xo4G7gL7pN
— ANI (@ANI) November 23, 2021
Advertisement
ವಿಡಿಯೋದಲ್ಲಿ ಏನಿದೆ?
ಆಫ್ರಿಕನ್ ಸಿಂಹಗಳಿರುವ ಗುಹೆಯ ಬಂಡೆ ಮೇಲೆ ವ್ಯಕ್ತಿಯೋರ್ವ ಕುಳಿತುಕೊಂಡಿದ್ದಾನೆ. ಕೆಳಗಿರುವ ದೈತ್ಯ ಸಿಂಹವೊಂದು ತನ್ನ ಗುಹೆಯ ಆಚೆ- ಈಚೆ ಓಡಾಡುತ್ತಿದೆ. ಆತನನ್ನು ನೋಡಿದ ಆ ಸಿಂಹವೂ ಆ ವ್ಯಕ್ತಿಯ ಮೇಲೆ ಆಕ್ರಮಣ ಮಾಡಲು ಹೊಂಚು ಹಾಕುತ್ತಾ ಕುಳಿತಿತ್ತು. ಈ ವೇಳೆ ಅಲ್ಲಿದ್ದ ಜನರು ಕೂಗಲು ಪ್ರಾರಂಭಿಸಿದ್ದಾರೆ. ಇದನ್ನು ನೋಡಿದ ಮೃಗಾಲಯದ ಅಧಿಕಾರಿಗಳು ಆ ಪ್ರದೇಶಕ್ಕೆ ಬಂದಿದ್ದಾರೆ. ಇದನ್ನು ಗಮನಿಸಿದ ಯುವಕ ಎದ್ದು ಹಿಂದಿರುಗಿದ್ದಾನೆ. ಈ ಸಂದರ್ಭದಲ್ಲಿ ಸಿಂಹ ಬಂಡೆಯ ಮೇಲೆ ಏರಗಲು ಪ್ರಯತ್ನಿಸಿರುವುದು ವಿಡಿಯೋದಲ್ಲಿದೆ. ಇದನ್ನೂ ಓದಿ: ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು
Advertisement
ಸಂಪೂರ್ಣ ನಿಷೇಧಿತ ಸ್ಥಳ ಇದಾಗಿದೆ. ಆದರೂ ಯಾವುದೇ ಒಪ್ಪಿಗೆ ತೆಗದುಕೊಳ್ಳದೇ ಸಾಯಿಕುಮಾರ್ ಬಂದಿದ್ದಾನೆ. ಮೃಗಾಲಯದ ಸಿಬ್ಬಂದಿ ದೂರಿನ ಮೇರೆಗೆ ಬಹದ್ದೂರ್‍ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.