ಬೆಂಗಳೂರು: ವಾಲ್ಮೀಕಿ ನಿಗಮದ (Valmiki Corporation Scam) ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. 3,072 ಪುಟಗಳ ಚಾರ್ಜ್‌ಶೀಟ್ ‘ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ.
ಕೋಟಿ ಕೋಟಿ ಲೂಟಿ ಮಾಡಿದ ಗ್ಯಾಂಗ್‌ನಲ್ಲಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಜಾಗವಿಲ್ಲ. ದೋಷಾರೋಪ ಪಟ್ಟಿಯಲ್ಲಿ ಇಬ್ಬರ ಹೇಳಿಕೆಗಳನ್ನು ದಾಖಲಿಸಿಲ್ಲ. ಪ್ರಕರಣದಲ್ಲಿ ಈ 12 ಜನ ಆರೋಪಿಗಳು ಮತ್ಯಾರ ಮೇಲೂ ಅನುಮಾನ ಇಲ್ಲ ಎಂದಿದ್ದಾರೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಡಿಲಿನ ದಾಳಿ ಎದುರಿಸಲು ತಾಳೆ ಮರಗಳನ್ನು ನೆಡಲು ಮುಂದಾದ ಒಡಿಶಾ – ಏನಿದರ ವಿಶೇಷ?
ವಾಲ್ಮೀಕಿ ನಿಗಮದ ಹಣ ಕೊಳ್ಳೆ ಹೊಡೆಯಲು ಅಕ್ಟೋಬರ್ 2023ರಲ್ಲೇ ಪ್ಲಾನ್ ನಡೆದಿತ್ತು. ಮಾನ್ಯತಾ ಟೆಕ್ ಪಾರ್ಕ್ನ ಫ್ಲಾಟ್‌ನಲ್ಲಿ ಮೊದಲ ಡೀಲಿಂಗ್ ಆಗಿತ್ತು. 89 ಕೋಟಿ ಹೇಗೆಲ್ಲಾ ಹೊಡೆಯಬೇಕು, ನಕಲಿ ದಾಖಲಾತಿ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತು. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗಾರಾಜ್ ಬಳಸಿ ಹಣ ಹೊಡೆಯಲು ಚಿಂತನೆ ಮಾಡಲಾಗಿತ್ತು.
ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್ ಪರಿಚಯ ಮಾಡಿಕೊಂಡ ಸತ್ಯನಾರಾಯಣ ವರ್ಮ, ಪರ್ಸೆಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣ ಕೊಡಿಸೋದಾಗಿ ವಂಚನೆ ಮಾಡಲಾಗಿದೆ. ಸಾಯಿತೇಜ @ ಶಿವಕುಮಾರ್ ವ್ಯಕ್ತಿಯನ್ನು ನಕಲಿ ಬ್ಯಾಂಕ್ ಸಿಬ್ಬಂದಿಯ ಹಾಗೇ ಬಿಂಬಿಸಲಾಗಿದೆ. ಪದ್ಮನಾಭ್, ಪರುಶರಾಮ್ ನಕಲಿ ಸಿಬ್ಬಂದಿಗೆ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆಗೆ ಮಳೆ ಭೀತಿ
94.73 ಕೋಟಿ ಹಣವನ್ನು ಕೂಡ ಫಸ್ಟ್ ಫೈನಾನ್ಸ್ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಫಸ್ಟ್ ಫಿನಾನ್ಸ್ ಬ್ಯಾಂಕ್‌ನಿಂದ 18 ನಕಲಿ ಕಂಪನಿ ಅಕೌಂಟ್‌ಗೆ ವರ್ಗಾವಣೆಯಾಗಿದೆ. ಆರೋಪಿಗಳು 94 ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.