ಹೈದರಾಬಾದ್: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆಮಾಡಿ ಶ್ವಾನಗಳ ಶವಗಳನ್ನು ಕೆರೆಗೆ ಎಸೆದಿರುವ ಘಟನೆ ಹೈದರಾಬಾದ್ನ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
Shocking!
As result of patronising evils, 300 innocent stray dogs were poisoned & dumped in pits in Lingapalem, Andra Pradesh#AnimalLovers & any sensible human should not let these barbaric killers go unpunished.
CM @ysjagan must bring out those guiltily to justice.@byadavbjp pic.twitter.com/9WnHU0XJIi
— Sunil Deodhar (@Sunil_Deodhar) August 2, 2021
Advertisement
ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಸಿಬ್ಬಂದಿ ಜುಲೈ 24ರಂದು 300ಕ್ಕೂ ಹೆಚ್ಚು ನಾಯಿಗಳು ತಿನ್ನುವ ಊಟದಲ್ಲಿ ವಿಷ ಬೆರೆಸಿ ಕೆಲವಕ್ಕೆ ವಿಷದ ಇಂಜೆಕ್ಷನ್ ಚುಚ್ಚಲಾಗಿದೆ. ಬಳಿಕ ಸಾವನ್ನಪ್ಪಿದ ನಾಯಿಗಳ ಶವಗಳನ್ನು ಕೆರೆಗೆ ಎಸೆದಿದ್ದಾರೆ. ಬೀದಿ ನಾಯಿಗಳ ಸಂತಾನಹರಣ ಮಾಡುವ ಬದಲು ಅವುಗಳನ್ನು ಕೊಲ್ಲಲಾಗಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಳೆಯ ಎಸಿ ಬಸ್ಗಳಲ್ಲಿ ಹಣ್ಣು, ತರಕಾರಿ ಸಾಗಾಟಕ್ಕೆ ಕೆಎಸ್ಆರ್ಟಿಸಿಯಿಂದ ಚಿಂತನೆ
Advertisement
Andhra Pradesh: Around 300 stray dogs allegedly killed & dumped in a pit by panchayat staff that reportedly injected them with poison, in Lingapalem, West Godavari
Dharmaji Gudem Sub Inspector Ramesh says “An animal rights activist complained to us on 29th July. FIR registered” pic.twitter.com/FZ5J7idQlD
— ANI (@ANI) August 2, 2021
Advertisement
ಈ ಅಮಾನವೀಯ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲೀ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ರೀತಿಯ ಆದೇಶ ಹೊರಡಿಸಿದ ಪಂಚಾಯತ್ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಕೆರೆಯಲ್ಲಿ ಹಾಕಿದ್ದ ನಾಯಿಗಳ ಶವಗಳು ನೀರಿನಲ್ಲಿ ಕೊಳೆತಿದ್ದು, ಸುತ್ತಲೂ ದುರ್ವಾಸನೆ ಹರಡಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದು, ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
Advertisement