ಉತ್ತರಾಖಂಡದಲ್ಲಿ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 300 ಮಂದಿ ಪ್ರಯಾಣಿಕರು

Public TV
2 Min Read
LANDSLIDE

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪಿಥೋರಗಢದಲ್ಲಿ (Pithoragarh) ಭೂಕುಸಿತ (Landslide) ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಲಖನ್‌ಪುರ (Lakhanpur) ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು ಬಿದ್ದಿದ್ದು, 100 ಮೀಟರ್ ರಸ್ತೆ ಕೊಚ್ಚಿ ಹೋಗಿದೆ. ಭೂಕುಸಿತದ ಪರಿಣಾಮ ಧಾರ್ಚುಲ ಮತ್ತು ಗುಂಜಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿ ಮಾಡಿದ 17ರ ಹುಡುಗ ಅರೆಸ್ಟ್

ಪಿಥೋರಗಢದ ಹೊರವಲಯದಲ್ಲಿ, ಧಾರ್ಚುಲಾ ಮೇಲೆ 45 ಕಿ.ಮೀ ದೂರದಲ್ಲಿರುವ ಲಿಪುಲೇಖ್-ತವಾಘಾಟ್ ಮೋಟಾರು ರಸ್ತೆ, ಲಖನ್‌ಪುರ ಬಳಿ ಭೂಕುಸಿತದಿಂದಾಗಿ 100 ಮೀಟರ್ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಸುಮಾರು 300 ಜನ ಪ್ರಯಾಣಿಕರು ಧಾರ್ಚುಲಾ ಮತ್ತು ಗುಂಜಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ರಸ್ತೆ ಸಂಚಾರ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ

ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರ್ದ್ವಾರ್, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಈ ಕುರಿತು ಪೊಲೀಸರು ಕೂಡಾ ಸೂಚನೆ ನೀಡಿದ್ದು, ಯಾತ್ರಾರ್ಥಿಗಳು ಸುರಕ್ಷಿತ ಸ್ಥಳಗಳಲ್ಲಿ ಉಳಿಯಿರಿ. ಅನಗತ್ಯವಾಗಿ ಎಲ್ಲಿಯೂ ಸಂಚರಿಸದೇ ತಮ್ಮ ವಾಹನಗಳನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ. ಹವಾಮಾನ ಸರಿಯಿದ್ದಾಗ ಮಾತ್ರ ಸಂಚರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಯಮುನೋತ್ರಿ ಮತ್ತು ಗಂಗೋತ್ರಿ ಧಾಮ ಯಾತ್ರೆಗೆ ಬರುವ ಎಲ್ಲಾ ಭಕ್ತರು ಹವಾಮಾನ ಮುನ್ಸೂಚನೆಯನ್ನು ತಿಳಿದ ನಂತರ ಪ್ರಯಾಣಿಸಿ. ಅಲ್ಲದೇ ತಮ್ಮೊಂದಿಗೆ ಛತ್ರಿ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಇಟ್ಟುಕೊಳ್ಳಿ ಎಂದು ಯಾತ್ರಾರ್ಥಿಗಳಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

Share This Article