ರಬತ್: ಶುಕ್ರವಾರ ತಡರಾತ್ರಿ ಮೊರಾಕ್ಕೋದಲ್ಲಿ (Morocco) ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ (Earthquake) 300 ಜನ ಮೃತಪಟ್ಟ ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‍ವರ್ಕ್ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಮರಕೇಶ್‍ನ ನೈಋತ್ಯದ 71 ಕಿಲೋಮೀಟರ್ ದೂರದ 18.5 ಕಿಮೀ ಆಳದಲ್ಲಿದೆ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪದ ತೀವ್ರತೆಗೆ ಪುರಾತನ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್
Advertisement
ಭೂಕಂಪದಿಂದಾಗಿ ನಗರದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಈಗ ತಾತ್ಕಾಲಿಕ ನೆಟ್‍ವರ್ಕ್ ವ್ಯವಸ್ಥೆ ಮಾಡಲಾಗಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ನೆರೆಯ ಅಲ್ಜೀರಿಯಾದಲ್ಲಿಯೂ ಭೂಕಂಪದ ಅನುಭವವಾಗಿದ್ದು, ಯಾವುದೇ ಹಾನಿ ಅಥವಾ ಸಾವುನೋವುಗಳನ್ನು ಉಂಟುಮಾಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Advertisement
2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೋಸಿಮಾದಲ್ಲಿ ಭೂಕಂಪ ಸಂಭವಿಸಿದಾಗ ಕನಿಷ್ಠ 628 ಜನರು ಸಾವನ್ನಪ್ಪಿದ್ದರು ಮತ್ತು 926 ಜನರು ಗಾಯಗೊಂಡಿದ್ದರು. 1980 ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ (Algeria) 7.3 ತೀವ್ರತೆಯ ಭೂಕಂಪವು 2,500 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೇ ಕನಿಷ್ಠ 300,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಏನಿದೆ? ಏನಿರಲ್ಲ?
Web Stories