ಒಂದು ವರ್ಷ ಮನೆಯಲ್ಲಿ ಕಾಲಕಳೆಯುವವರು ತಮ್ಮ ಸುತ್ತಮುತ್ತಲಿನ ಕೆಲಸವನ್ನು ಕಲಿತು ಕೊಂಡಿರುತ್ತಾರೆ. ಇನ್ನೂ ಕೆಲವರು ಆನ್ಲೈನ್ನಲ್ಲಿ ಮುಳುಗಿ ಕಾಲ ಕಳೆಯುತ್ತಾರೆ.
ಸಾಮಾನ್ಯವಾಗಿ ನಿಮ್ಮ ಮನೆಯ ಗೋಡೆಗೆ ಬಣ್ಣ ಬಳಿಯಲು ನೀವೇ ಮುಂದಾದರೆ, ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಾ. ಆದರೆ ವ್ಯಕ್ತಿಯೊಬ್ಬ ತನ್ನ ಬಿಡುವಿನ ಸಮಯದಲ್ಲಿ ಮನೆಗೆ ಬಣ್ಣ ಬಳಿಯುವುದನ್ನೇ ತನ್ನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾನೆ.
Advertisement
Advertisement
ಈ ವ್ಯಕ್ತಿ ಕೇವಲ 30 ಸೆಕೆಂಡುಗಳಲ್ಲಿ ಗೋಡೆಗೆ ಬಣ್ಣ ಬಳಿಯುವ ಚಾತುರ್ಯತೆಯನ್ನು ಹೊಂದಿದ್ದಾನೆ. ಇದೀಗ ಈ ಟಿಕ್ಟಾಕ್ ಬಳಕೆದಾರ ಶೇರ್ ಮಾಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ. ಜೊತೆಗೆ ಭೂಮಿ ಮೇಲೆ ಇದೆಲ್ಲಾ ಹೇಗೆ ಸಾಧ್ಯ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾನೆ.
Advertisement
ವೀಡಿಯೋನಲ್ಲಿರುವ ವ್ಯಕ್ತಿಯು ಹಳದಿ ಗೋಡೆಯ ಪಕ್ಕ ಓಡಾಡುತ್ತಾ, ರೋಲರ್ ಮೂಲಕ ಬಿಳಿ ಬಣ್ಣದ ಪೇಂಟ್ ಬಳಸಿ ಜಿಗ್-ಜಾಗ್ ಸ್ಟೋಕ್ ಮಾಡಿದ್ದಾನೆ. ರೋಲರ್ ಗೋಡೆಯ ತುದಿಯನ್ನು ತಲುಪಿದ ನಂತರ ಉಳಿದ ಹಳದಿ ಬಣ್ಣ ಗೋಡೆಯ ಬಳಿ ಬೇಗನೆ ತಲುಪಿ ಬಿಳಿ ಬಣ್ಣ ಬಳೆಯುತ್ತಾನೆ. ಒಂದು ಮ್ಯಾಗಿ ಬೇಯಿಸುವುದರಷ್ಟರಲ್ಲಿ ಒಂದು ಗೋಡೆಗೆ ಸಂಪೂರ್ಣವಾಗಿ ಬಿಳಿ ಬಣ್ಣವನ್ನು ಬಳೆದಿರುತ್ತಾನೆ.
Advertisement
ಈತನ ಕೈಚಳಕ್ಕೆ ಮಾರುಹೋಗಿರುವ ನೆಟ್ಟಿಗರು ಇದೀಗ ಈತನನ್ನು ಹುಡುಕಾಡುತ್ತಿದ್ದಾರೆ. ಒಬ್ಬರಂತೂ ನೀವು ಬಂದು ನಮ್ಮ ಮನೆಯ ಗೋಡೆ ಹಾಗೂ ಮೆಟ್ಟಿಲುಗಳಿಗೆ ಬಣ್ಣ ಬಳೆದು ಕೊಡುತ್ತೀರಾ? ನಾನು ನಿಮಗೆ ಒಂದು ಗಂಟೆಗೆ ಎಷ್ಟಾಗುತ್ತದೆ ಅಷ್ಟು ಹಣ ಪಾವತಿಸುತ್ತೇನೆ ಎಂದು ಕಮೆಂಟ್ ಮಾಡಿದ್ದಾನೆ.
https://youtu.be/UmKzrMNsFPo