ನವದೆಹಲಿ: ಮಹಾರಾಷ್ಟ್ರದ ಔರಂಗಬಾದ್‍ನ ಕಿರಾಣಿ ಅಂಗಡಿಯಲ್ಲಿ ಮಾಡಿದ್ದ 200 ರೂ. ಸಾಲವನ್ನು ತೀರಿಸಲು 30 ವರ್ಷಗಳ ನಂತರ ಕೀನ್ಯಾ ದೇಶದ ಸಂಸದರೊಬ್ಬರು ಭಾರತಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.
ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಸಂಸದರಾಗಿರುವ ರಿಚರ್ಡ್ ತಾಂಗ್, ಅವರು ತಾನು ವಿದ್ಯಾರ್ಥಿಯಾಗಿದ್ದಾಗ ಔರಂಗಬಾದ್‍ನ ಕಿರಾಣಿ ಅಂಗಡಿಯೊಂದರಲ್ಲಿ ಮಾಡಿದ ಸಾಲವನ್ನು ತೀರಿಸಲು 30 ವರ್ಷಗಳ ನಂತರ ಮಹಾರಾಷ್ಟ್ರದ ಔರಂಗಬಾದ್‍ಗೆ ಆಗಮಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.
Advertisement
https://www.facebook.com/hontongi/photos/a.1506471763013526/2301989836795044/?
Advertisement
ಕೀನ್ಯಾ ದೇಶದ ನ್ಯಾರಿಬರಿ ಚಚೆ ಕ್ಷೇತ್ರದ ಸಂಸದ ರಿಚರ್ಡ್ ತಾಂಗ್. 1985-89 ರಲ್ಲಿ ಔರಂಗಬಾದ್‍ನ ಸ್ಥಳೀಯ ಕಾಲೇಜ್ ಕಾಲೇಜ್‍ನಲ್ಲಿ ಮ್ಯಾನೇಜ್‍ಮೆಂಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಅವರು ಮರಳಿ ತಾಯ್ನಾಡಿಗೆ ಹೋಗುವ ಸಂದರ್ಭದಲ್ಲಿ ಬಸ್ ಚಾರ್ಜ್‍ಗೆ ಹಣ ಇರಲಿಲ್ಲ. ಹೀಗಾಗಿ ಔರಂಗಬಾದ್‍ನ ವಾಂಖೇಡೆನಗರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಎಸ್.ಕೆ.ಗಾವ್ಲಿ ಬಳಿ 200 ರೂ. ಸಾಲ ಕೊಡು ನಿನಗೆ ಮರಳಿಸುತ್ತೇವೆ ಎಂದು ಸಾಲ ಪಡೆದಿದ್ದರು.
Advertisement
https://www.facebook.com/hontongi/photos/pcb.2300650836928944/2300650730262288/?
Advertisement
ತಾಯ್ನಾಡಿಗೆ ಮರಳಿದ ನಂತರ ಸಾಲ ತೀರಿಸುವುದನ್ನು ಮರೆತಿರಲಿಲ್ಲ. ಹೀಗಾಗಿ ಸಾಲ ಪಡೆದು 30 ವರ್ಷ ಕಳೆದರೂ ಇದೀಗ ಆ ಹಣವನ್ನು ಮರಳಿಸಲು ಕೀನ್ಯಾದಿಂದ ಮರಳಿದ್ದಾರೆ. ಕೀನ್ಯಾದಿಂದ ಮರಳುತ್ತಿದ್ದಂತೆ ನೇರವಾಗಿ ಗಾವ್ಲಿಯ ಕಿರಾಣಿ ಅಂಗಡಿಗೆ ತೆರಳಿದ್ದಾರೆ. ಪ್ರಾರಂಭದಲ್ಲಿ ರಿಚರ್ಡ್ ಅವರನ್ನು ಪತ್ತೆ ಹಚ್ಚಲು ಕಿರಾಣಿ ಅಂಗಡಿ ಮಾಲೀಕ ಗ್ವಾಲಿಗೆ ಸಾಧ್ಯವಾಗಿಲ್ಲ. ನಂತರ ಸಂಸದ ರೀಚರ್ಡ್ ಅವರೇ ಗಾವ್ಲಿಯನ್ನು ಗುರುತಿಸಿ ಮಾತನಾಡಿಸಿದ್ದಾರೆ.
ಗಾವ್ಲಿ ಆಶ್ಚರ್ಯಚಿಕಿತರಾಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ, ನನ್ನ ಕಣ್ಣನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಗಾವ್ಲಿಯನ್ನು ಭೇಟಿಯಾದ ನಂತರ ಸಂಸದ ರೀಚರ್ಡ್ ಅವರಿಗೂ ಸಹ ಭಾವನೆ ತುಂಬಿ ಬಂದಿದ್ದು, ನಾನು ಔರಂಗಬಾದ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತುಂಬಾ ಕಷ್ಟದ ಸ್ಥಿತಿಯಲ್ಲಿದ್ದೆ. ಆಗ ಗಾವ್ಲಿ ನನಗೆ ಸಹಾಯ ಮಾಡಿದರು. ನಾನು ತಾಯ್ನಾಡಿಗೆ ಮರಳಬೇಕು ಹಣ ಕೊಡಿ ನಾನು ಮರಳಿ ಬಂದು ನಿಮಗೆ ಹಣ ತೀರಿಸುತ್ತೇನೆ ಎಂದು ಹೇಳಿದ್ದೆ. ಹೀಗಾಗಿ ಇದೀಗ 200 ರೂ.ಹಣ ಮರುಪಾವತಿಸಲು ಬಂದಿದ್ದೇನೆ. ನಾನು ಗಾವ್ಲಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವೃದ್ಧ ಗಾವ್ಲಿ ಹಾಗೂ ಹಾಗೂ ಆತನ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ, ಅವರು ನನಗೆ ಒಂದು ಅದ್ಭುತವಿದ್ದಂತೆ. ಅವರು ಊಟಕ್ಕೆ ನನ್ನನ್ನು ಹೋಟೆಲ್‍ಗೆ ಕರೆದೊಯ್ಯುತ್ತಿದ್ದರು. ಆದರೆ, ನಾನು ಅವರ ಮನೆಯಲ್ಲಿಯೇ ಊಟ ಮಾಡುವಂತೆ ಹಠ ಹಿಡಿದೆ. ಅವರ ಮನೆಯಲ್ಲಿಯೇ ಊಟ ಮಾಡಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಔರಂಗಬಾದ್‍ನಿಂದ ಹೊರಡುವಾಗ ಸಂಸದ ರೀಚರ್ಡ್ ಅವರು ಗಾವ್ಲಿಯನ್ನು ಕೀನ್ಯಾಗೆ ಬರುವಂತೆ ಕೇಳಿಕೊಂಡಿದ್ದಾರೆ.