– ಪ್ರೀತಿಗಾಗಿ ಹಿಂದೂ ಧರ್ಮಕ್ಕೆ ಬಂದ ಶಬ್ನಮ್
ಲಕ್ನೋ: ಮೂರು ಮಕ್ಕಳನ್ನು ಹೊಂದಿರುವ 30 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಉತ್ತರ ಪ್ರದೇಶದ (Uttar Pradesh) ಅಮ್ರೋಹ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಹಿಂದೂ ಧರ್ಮಕ್ಕೆ (Conversion) ಮತಾಂತರಗೊಂಡು, 12ನೇ ತರಗತಿಯ ವಿದ್ಯಾರ್ಥಿಯನ್ನು (Student) ಮದುವೆಯಾಗಿದ್ದಾಳೆ.
ಮಹಿಳೆಯನ್ನು ಶಬ್ನಮ್ ಎಂದು ಗುರುತಿಸಲಾಗಿದ್ದು, ಆಕೆ ಮತಾಂತರದ ಬಳಿಕ ತನ್ನ ಹೆಸರನ್ನು ಶಿವಾನಿ ಎಂದು ಬದಲಿಸಿಕೊಂಡಿದ್ದಾಳೆ. ಆಕೆಯ ಪೋಷಕರು ಮೃತಪಟ್ಟಿದ್ದು. ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯೂ ಬಲವಂತ, ವಂಚನೆ ಅಥವಾ ಯಾವುದೇ ಇತರ ವಂಚನೆಯ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ. ಪೊಲೀಸರು ಈ ವಿವಾಹದ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ. ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ.
ಶಿವಾನಿ ಮೊದಲು ಮೀರತ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು, ಸ್ವಲ್ಪ ವರ್ಷಗಳ ಬಳಿಕ ಆಕೆಗೆ ವಿಚ್ಛೇದನವಾಗಿತ್ತು. ಎಂದು ವೃತ್ತ ಅಧಿಕಾರಿ ತಿಳಿಸಿದ್ದಾರೆ. ನಂತರ ಆಕೆ ಸೈದನ್‌ವಾಲಿ ಗ್ರಾಮದ ನಿವಾಸಿ ತೌಫಿಕ್ ಎಂಬಾತನನ್ನು ವಿವಾಹವಾಗಿದ್ದಳು. ಅವರು 2011 ರಲ್ಲಿ ರಸ್ತೆ ಅಪಘಾತದ ನಂತರ ಅಂಗವಿಕಲರಾಗಿದ್ದರು. ಇದಾದ ಬಳಿಕ ಇತ್ತೀಚೆಗೆ ಆಕೆ 12 ನೇ ತರಗತಿಯಲ್ಲಿ ಓದುತ್ತಿದ್ದ ಸುಮಾರು 18 ವರ್ಷ ವಯಸ್ಸಿನ ಹುಡುಗನೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದರು.
ಶಬ್ನಮ್ ಕಳೆದ ಶುಕ್ರವಾರ ತೌಫಿಕ್‌ನಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಇದೀಗ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಯುವಕನನ್ನು ಮದುವೆಯಾಗಿದ್ದಾಳೆ.
ಯುವಕನ ತಂದೆ, ಸೈದನ್‌ವಾಲಿ ನಿವಾಸಿ ದತಾರಾಮ್ ಸಿಂಗ್, ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಅವರಿಬ್ಬರು ಸಂತೋಷವಾಗಿದ್ದರೆ ನಮಗೂ ಸಂತೋಷ. ಇಬ್ಬರೂ ಚೆನ್ನಾಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.