ಮುಂಬೈ: 40 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಅವನ್ನು ವಿಡಿಯೋ ಮಾಡಿ ಆಕೆಯ ಬಳಿ ಹಣ ಪಡೆದುಕೊಂಡಿರುವ 30 ವರ್ಷದ ಆರೋಪಿಗಾಗಿ ಸ್ಯಾಂಟಾಕ್ರೂಜ್ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿ ಸಂತ್ರಸ್ತೆ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 6 ರಂದು ನಾವು ದೂರೊಂದನ್ನು ದಾಖಲಿಸಿಕೊಂಡಿದ್ದೇವೆ. ದೂರಿನ ಪ್ರಕಾರ ಇಬ್ಬರು ಮಕ್ಕಳ ತಾಯಿ ದುಬೈಯಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರು ಮೊದಲ ಬಾರಿಗೆ ಒಬ್ಬ ವ್ಯಕ್ತಿಯನ್ನು ದುಬೈನಲ್ಲಿಯೇ ಭೇಟಿಯಾಗಿದ್ದರು.
Advertisement
Advertisement
ಸಂತ್ರಸ್ತೆ ದುಬೈಗೆ ತೆರಳುವ ಮೊದಲು ತನ್ನ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ನಾವಿಬ್ಬರು ಸ್ನೇಹಿತರಾಗಿದ್ದೇವು. ಮೊದಲು ನನ್ನನ್ನು ದುಬೈನಲ್ಲಿ ಅತ್ಯಾಚಾರ ಮಾಡಿದ್ದಾನೆ. ನಂತರ ಮುಂಬೈಗೆ ಕರೆದುಕೊಂಡು ಅನೇಕ ಬಾರಿ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅತ್ಯಾಚಾರದ ವಿಡಿಯೋವನ್ನು ಸಹ ಮಾಡಿದ್ದಾನೆ. ಈ ವಿಡಿಯೋನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
Advertisement
ಆರೋಪಿ ಆ ವಿಡಿಯೋವನ್ನು ಇಟ್ಟುಕೊಂಡು ಸುಮಾರು 6,09,000 ರೂ. ಹಣ ಪಡೆದುಕೊಂಡಿದ್ದಾನೆ. ಆರೋಪಿ, ಮತ್ತೆ ಸಂತ್ರಸ್ತೆಗೆ ಹೆಚ್ಚು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆದ್ದರಿಂದ ಸಂತ್ರಸ್ತೆ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ನಾವು ಈ ಪ್ರಕರಣವನ್ನು ಅತ್ಯಾಚಾರ, ಮತ್ತು ಸುಲಿಗೆ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದು, ಈ ಪ್ರಕರಣವನ್ನು ತನಿಖೆ ಮಾಡಲೆಂದು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.