– ಬೆಂಗಳೂರು ಹೋಟೆಲ್ ಮಾಲೀಕರ ಕಿಡಿ
ಬೆಂಗಳೂರು: ಮೆಟ್ರೋ ದರ, ಬಸ್ ದರ, ವಿದ್ಯುತ್ ದರ ಏರಿಕೆಯಾಯ್ತ. ಈಗ ಏಪ್ರಿಲ್ 1ರಿಂದ ಕಸದ ಸೆಸ್ ಬರೆ ಶುರುವಾಗಲಿದೆ. ಬೆಂಗಳೂರಿನ (Bengaluru) ಹೋಟೆಲ್‌ಗಳಿಗೆ ಕಸದ ಸೆಸ್ (Garbage Cess) ಬರೆಯ ಬಿಸಿ ತಟ್ಟಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದರ ಏರಿಕೆಯ ಹೊರೆ ಜನರ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಇದರ ಮಧ್ಯೆ ಈಗ ಏಪ್ರಿಲ್‌ನಿಂದ ಕಸದ ಸೆಸ್ ಬರೆ ಬೀಳಲಿದೆ. ಕಸದ ಸೆಸ್‌ಗೆ ಈಗ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (Hotel Association) ಕಿಡಿಕಾರಿದೆ. ಒಂದು ಕೆಜಿಗೆ 12 ರೂ. ಫಿಕ್ಸ್ ಮಾಡಿದ್ದು, ಈ ಹಿಂದೆ ತಿಂಗಳಿಗೆ 5 ಸಾವಿರ ಕಸದ ಸೆಸ್ ಕಟ್ಟಲಾಗುತ್ತಿತ್ತು. ಆದರೆ ಈಗ ಬರೋಬ್ಬರಿ 30 ಸಾವಿರ ರೂ. ಕಸದ ಸೆಸ್ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್ ಜಾಮೀನು ಅರ್ಜಿ ಆದೇಶ ಇಂದು
ಸಾಮಾನ್ಯವಾಗಿ ದರ್ಶಿನಿ ಹೋಟೆಲ್‌ನಲ್ಲಿ, ದಿನಕ್ಕೆ 60-100 ಕೆಜಿಯಷ್ಟು ಕಸ ಉತ್ಪಾದನೆಯಾಗಲಿದೆ. ಮೊದಲೆಲ್ಲ ಪ್ರತಿ ತಿಂಗಳು ಕಸದ ಸೆಸ್ ಅಂತ ಬಿಬಿಎಂಪಿಗೆ ಕಟ್ಟಲಾಗುತ್ತಿತ್ತು. ಆದರೆ ಈಗ ಏಕಾಏಕಿ ಕಸದ ಸೆಸ್ 30 ಸಾವಿರಕ್ಕೆ ಏರಿಕೆ ಮಾಡಿರೋದು ಸರಿಯಲ್ಲ. ಇದು ಅವೈಜ್ಞಾನಿಕ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಅಂತ ಹೇಳ್ಕೊಂಡು ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ
ಒಟ್ಟಾರೆ, ದರ ಏರಿಕೆಯ ಭಾರವನ್ನು ಹೊರಲಾರದೇ ಜನ ಹೈರಾಣಾಗಿದ್ದಾರೆ. ಅದರ ಮಧ್ಯೆ ದಿನಕ್ಕೊಂದು ದರ ಏರಿಕೆ ಬಿಸಿಗೆ ಜನ ಹಿಡಿಶಾಪ ಹಾಕುವ ಪರಿಸ್ಥಿತಿ ಉದ್ಭವವಾಗಿದೆ. ಇದನ್ನೂ ಓದಿ: ಚಾಮರಾಜನಗರ| ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ – 18 ಅಡಿ ಉದ್ದದ ಸರಳಲ್ಲಿ ಬಾಯಿ ಬೀಗ