ಬಿಡುವಿಲ್ಲದ ದಿನಗಳಿದ್ದರೂ ಅಂತ್ಯದಲ್ಲಿ ಏನಾದ್ರೂ ಸುಲಭವಾಗಿ ಹಾಗೂ ರುಚಿಕರವಾಗಿ ನಾನ್‌ವೆಜ್ ಅಡುಗೆ ಮಾಡಬೇಕಾಗಿ ಬಂದಾಗ ತಲೆ ಓಡಿಸೋ ಅಗತ್ಯ ಹೆಚ್ಚಿರುತ್ತದೆ. ನಾವಿಂದು ಹೇಳಿಕೊಡುತ್ತಿರುವ ಚೀಸೀ ಗಾರ್ಲಿಕ್ ಸಿಗಡಿ ಮಾಡೋದು ಸಿಂಪಲ್ ಹಾಗೂ 30 ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು. ಹೆಚ್ಚು ಮಸಾಲೆ ಎನಿಸದ ಈ ರೆಸಿಪಿಯನ್ನು ಮಕ್ಕಳು ಇಷ್ಟಪಡುತ್ತಾರೆ. ಫಟಾಫಟ್ ಅಂತ ಮಾಡಬಹುದಾದ ನಾನ್‌ವೆಜ್ ಲಿಸ್ಟ್ನಲ್ಲಿ ನೀವು ಕೂಡಾ ಚೀಸೀ ಗಾರ್ಲಿಕ್ ಸಿಗಡಿ ರೆಸಿಪಿಯನ್ನು ಸೇರಿಸಿಕೊಳ್ಳಬಹುದು.
Advertisement
ಬೇಕಾಗುವ ಪದಾರ್ಥಗಳು:
ಹಾಲು – 2 ಕಪ್
ಕ್ರೀಮ್ ಚೀಸ್ – 100 ಗ್ರಾಂ
ಮೈದಾ ಹಿಟ್ಟು – 2 ಟೀಸ್ಪೂನ್
ಬೆಣ್ಣೆ – 3 ಟೀಸ್ಪೂನ್
ಕೊಚ್ಚಿದ ಬೆಳ್ಳುಳ್ಳಿ – 3 ಟೀಸ್ಪೂನ್
ಸಿಪ್ಪೆ ಸುಲಿದು ಸ್ವಚ್ಛಗೊಳಿಸಿದ ಸಿಗಡಿ – ಅರ್ಧ ಕೆಜಿ
ತುರಿದ ಮೊಝಿರೆಲ್ಲಾ ಚೀಸ್ – 1 ಕಪ್
ಕರಿಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕರಿಸಲು ಇದನ್ನೂ ಓದಿ: ಟ್ರೈ ಮಾಡಿ ಬಾರ್ಬೆಕ್ಯೂ ಚಿಕನ್ ಸಲಾಡ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬ್ಲೆಂಡರ್‌ನಲ್ಲಿ ಹಾಲು, ಕ್ರೀಮ್ ಚೀಸ್, ಮೈದಾ ಹಿಟ್ಟು ಮತ್ತು ಉಪ್ಪನ್ನು ಹಾಕಿ ನಯವಾಗುವತನಕ ಬ್ಲೆಂಡ್ ಮಾಡಿ ಪಕ್ಕಕ್ಕಿಡಿ.
* ಒಂದು ಪ್ಯಾನ್‌ನಲ್ಲಿ ಬೆಣ್ಣೆಯನ್ನು ಕರಗಿಸಿ ಬೆಳ್ಳುಳ್ಳಿ ಸೇರಿಸಿ ಸುಮಾರು 1 ನಿಮಿಷ ಹುರಿಯಿರಿ. ನಂತರ ಸಿಗಡಿಯನ್ನು ಸೇರಿಸಿ 3-5 ನಿಮಿಷ ಬೇಯಿಸಿ.
* ಪ್ಯಾನ್‌ನಿಂದ ಸಿಗಡಿ ತೆಗೆದುಹಾಕಿ, ಬೆಳ್ಳುಳ್ಳಿ ಮತ್ತು ಬೆಣ್ಣೆ ಅದರಲ್ಲೇ ಇರಲಿ.
* ಈಗ ಅದಕ್ಕೆ ಹಾಲಿನ ಮಿಶ್ರಣ ಸೇರಿಸಿ, ಮಧ್ಯಮ ಉರಿಯಲ್ಲಿ ಸುಮಾರು 4 ನಿಮಿಷ ಬೆರೆಸಿ. ಹಾಲು ಕುದಿ ಬಂದು ದಪ್ಪವಾಗಲು ಪ್ರಾರಂಭವಾಗುವವರೆಗೆ ಸುಮಾರು 6 ನಿಮಿಷ ಬೆರೆಸಿ.
* ನಂತರ ಉರಿಯನ್ನು ಆಫ್ ಮಾಡಿ, ತುರಿದ ಚೀಸ್ ಅನ್ನು ಸೇರಿಸಿ.
* ಮುಚ್ಚಳ ಮುಚ್ಚಿ, 5 ನಿಮಿಷ ಹಾಗೆಯೇ ಬಿಡಿ.
* ಈಗ ಸಾಸ್‌ಗೆ ಸಿಗಡಿ ಸೇರಿಸಿ, ಮತ್ತೆ 5 ನಿಮಿಷ ಹಾಗೆಯೇ ಬಿಡಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚೀಸೀ ಗಾರ್ಲಿಕ್ ಸಿಗಡಿ ಸಿದ್ಧವಾಗುತ್ತದೆ. ಇದನ್ನು ನಿಮ್ಮಿಷ್ಟದ ನೂಡಲ್ಸ್ನೊಂದಿಗೆ ಬಡಿಸಬಹುದು. ಇದನ್ನೂ ಓದಿ: ಮಶ್ರೂಮ್ ರಾಮೆನ್ – ಇನ್ಸ್ಟೆಂಟೆ ನೂಡಲ್ಸ್ ರೆಸಿಪಿ
Advertisement
Web Stories