ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ (Darshan) ಕೊನೆಗೂ ಖಾಕಿ ಎದುರು ಸತ್ಯ ಬಾಯ್ಬಿಟ್ಟಿದ್ದಾರೆ.
ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿಕೊಳ್ಳಲು 30 ಲಕ್ಷ ರೂ. ನೀಡಿರುವು ದರ್ಶನ್ ಹೇಳಿರುವ ಸ್ವ-ಇಚ್ಛಾ ಹೇಳಿಕೆಯನ್ನು ಪೊಲೀಸರು (Bengaluru Police) ರಿಮ್ಯಾಂಡ್ ಕಾಪಿಯಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ಎಕ್ಸ್‌ಬಾಕ್ಸ್ ಕಂಟ್ರೋಲರ್, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್ ಓಪನ್ ಮಾಡಿದ ಯುವತಿ ಜಸ್ಟ್ ಮಿಸ್!
ಸತ್ಯ ಕಕ್ಕಿಸಿದ ಖಾಕಿ:
ಪ್ರಕರಣದ ವಿಚಾರಣೆ ವೇಳೆ ದರ್ಶನ್, ಕೊಲೆಯಾದ ರೇಣುಕಾಸ್ವಾಮಿ (Renukaswamy) ಮೃತದೇಹವನ್ನ ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಡೀಲ್ ಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್, ಲಾಯರ್ ಮತ್ತು ಶವ ಸಾಗಿಸೋ ವ್ಯಕ್ತಿಗಳಿಗೆ ತಗುಲುವ ವೆಚ್ಚವನ್ನ ಬರಿಸಲು ಪ್ರದೋಶ್‌ಗೆ 30 ಲಕ್ಷ ರೂ. ಹಣ ನೀಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮೀರಿದ ಪದಾರ್ಥಗಳ ಮಾರಾಟ – ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳಿಂದ ಕ್ಷಿಪ್ರ ಕ್ರಮ!
ತನಿಖೆ ಇನ್ನಷ್ಟು ತೀವ್ರ:
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಬೆಂಗಳೂರಿನ ಜಯಣ್ಣ ಶೆಡ್, ಮೈಸೂರಿನ ಹೋಟೆಲ್ ಮತ್ತು ಫಾರ್ಮ್ಹೌಸ್‌ನಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಮೂರು ಬೈಕ್ ಸೀಜ್ ಮಾಡಿದ್ದಾರೆ. ಸರಿಯಾಗಿ ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದ ನಟಿ ಪವಿತ್ರಾಗೌಡಗೆ (Pavitra Gowda) ಮಲ್ಲತ್ತಹಳ್ಳಿ ಬಿಬಿಎಂಪಿ ಆಸ್ಪತ್ರೆಯಲ್ಲಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು!
ಇನ್ನು, ಕ್ರೈಂ ಸೀನ್‌ನಲ್ಲಿಯೇ ಇಲ್ಲದ ಕೇಶವಮೂರ್ತಿ, ನಿಖಿಲ್ ಮತ್ತು ಕಾರ್ತಿಕ್ 30 ಲಕ್ಷ ರೂ. ಆಸೆಗಾಗಿ ಕೊಲೆ ಆರೋಪ ಹೊತ್ತು ಪೊಲೀಸರ ಮುಂದೆ ಶರಣಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಮಧ್ಯೆ, ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಪೊಲೀಸ್ ಕಮೀಷನರ್ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಅತ್ತ, ಚಿತ್ರದುರ್ಗದಲ್ಲಿ ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಸಚಿವರಾದ ಪರಮೇಶ್ವರ್, ಡಿ ಸುಧಾಕರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.