ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಮರಣ ಮಳೆಗೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಅಲಲ್ಲಿ ಭೂಕುಸಿತ, ರಸ್ತೆಗಳೇ ಕೊಚ್ಚಿ ಹೋಗಿರೋದ್ರಿಂದ ರಕ್ಷಣಾ ಕಾರ್ಯಾಚರಣೆ ದುಸ್ತರವಾಗಿದೆ.
ಇಡುಕ್ಕಿ ಡ್ಯಾಂನಿಂದ ನೀರು ಹರಿದು ಹಲವು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ. ಸೇನೆಯ 8 ತುಕಡಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಿಲಿಟರಿ ಎಂಜಿನಿಯರಿಂಗ್ ಸರ್ವಿಸಸ್‍ನಿಂದ ಮೂರು ತುಕಡಿಗಳನ್ನು, ಬೆಂಗಳೂರಿನಿಂದ ಎರಡು, ಹೈದರಾಬಾದ್‍ನಿಂದ ಒಂದು ತುಕಡಿಯನ್ನು ಕೇರಳಕ್ಕೆ ಕಳುಹಿಸಲಾಗಿದೆ. ಈ ನಡುವೆ, ವಯನಾಡ್ ಜಿಲ್ಲೆಯ ಪನಮರಮ್‍ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ ಸುಮಾರು 50 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಇದನ್ನೂ ಓದಿ: ಕೇರಳದಲ್ಲಿ ವರುಣನ ಆರ್ಭಟ – ಮುನ್ನಾರ್ ರೆಸಾರ್ಟ್ ನಲ್ಲಿ ಸಿಲುಕಿದ 60 ಪ್ರವಾಸಿಗರು
Advertisement
Advertisement
ಪತ್ತನಂತಿಟ್ಟ ಜಿಲ್ಲೆಯ ಕಕ್ಕಿ ಅಣೆಕಟ್ಟೆ ಹಾಗೂ ಚೆರುತ್ತೋಣಿ ಅಣೆಕಟ್ಟೆಯಿಂದ ಹೊರಬರುವ ಪ್ರವಾಹ ಅಧಿಕವಾಗಿರುವುದರಿಂದ ಕೊಚ್ಚಿಯ ವೆಲ್ಲಿಂಗ್ಟನ್ ದ್ವೀಪ ಮುಳುಗಡೆಯಾಗುವ ಭೀತಿಯಿದೆ. ಇದನ್ನೂ ಓದಿ: ಕೇರಳ ಮಳೆಗೆ ಮೈಸೂರು ಭಾಗ ತತ್ತರ- ಇತ್ತ ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜಿಗೆ ರಜಾ
Advertisement
#Kerala: Kochi's Aluva is flooded as water level of Periyar river has risen after 5 shutters of Idukki dam were opened today. Manappuram Sree Mahadeva Temple submerged in the flood. An Indian Coast Guard helicopter&Fire and rescue dept have been deployed for survey of the region. pic.twitter.com/sNcUHy6Zfh
— ANI (@ANI) August 10, 2018
Advertisement
ಒಟ್ಟಿನಲ್ಲಿ ಕಂಡು ಕೇಳರಿಯದ ಭಾರೀ ಮಳೆಗೆ ದೇವರನಾಡು ಕೇರಳ ತತ್ತರವಾಗಿದ್ದು, 2 ದಿನಗಳ ಹಿಂದೆ ಕೇರಳದ ಮುನ್ನಾರ್‍ಗೆ ಪ್ರವಾಸಕ್ಕೆ ಬಂದಿದ್ದ 6 ಮಂದಿ ಮಂಡ್ಯ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಸ್ತೆ ಜಲಾವೃತವಾಗಿ ದಾರಿ ಕಾಣದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews