ಇಸ್ಲಾಮಾಬಾದ್: ಪ್ರಯಾಣಿಕರಿದ್ದ ಬಸ್ ಮತ್ತು ಕಾರು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ 30 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ (Pakistan) ನಡೆದಿದೆ.
ಇಲ್ಲಿನ ಖೈಬರ್ ಪಖ್ತುಂಖ್ವಾದ (Khyber Pakhtunkhwa) ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನಂತರ ಕಂದರಕ್ಕೆ ಉರುಳಿ ಬಿದ್ದಿವೆ. ಬಸ್ ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಶಿಥಿಯಾಲ್ ಪ್ರದೇಶದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ
Advertisement
Advertisement
ಬಸ್ ಮತ್ತು ಕಾರು ಎರಡೂ ಕಂದರಕ್ಕೆ ಉರುಳಿವೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮತ್ತು ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಗಾಯಾಳುಗಳು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
Advertisement
ಭೀಕರ ರಸ್ತೆ ಅಪಘಾತಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮರುಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಅಗಲಿದವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಮುಖ್ಯಮಂತ್ರಿ ಕೂಡ ಬಸ್ ಅಪಘಾತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪಾಕ್ ಪ್ರೇಮಿ ಪತ್ತೆ ಪ್ರಕರಣ – ಪ್ಯೂರ್ ಲವ್‍ಗಾಗಿ ಭಾರತಕ್ಕೆ ಅಕ್ರಮ ಪ್ರವೇಶ
Advertisement
ಇದೇ ರೀತಿ ಜನವರಿ 29 ರಂದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ರಯಾಣಿಕರ ಕೋಚ್ ಕಂದರಕ್ಕೆ ಬಿದ್ದು 41 ಜನರು ಸಾವನ್ನಪ್ಪಿದ್ದರು. 48 ಪ್ರಯಾಣಿಕರನ್ನು ಹೊತ್ತಿದ್ದ ವಾಹನವು ಕ್ವೆಟ್ಟಾದಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ವಾಹನವು ಲಾಸ್ಬೆಲಾ ಬಳಿ ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದು ನಂತರ ಕಂದರಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k