ರಾಯಚೂರು: 30 ಗುಂಟೆ ಜಮೀನು ಮಾರಾಟದ ವಿಚಾರವಾಗಿ 2 ಗುಂಪುಗಳು ಮನಬಂದಂತೆ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಸಿಂಧನೂರು ತಾಲೂಕು ವಿರುಪಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶರಣಪ್ಪ ಮತ್ತು ನಿರುಪಾದಿ ಕುಟುಂಬದ ನಡುವೆ ಈ ಘರ್ಷಣೆ ನಡೆದಿದೆ. ಶರಣಪ್ಪ ಎಂಬಾತ ನಿರುಪಾದಿಗೆ 30 ಗುಂಟೆ ಜಮೀನು ಮಾರಾಟದ ಬಗ್ಗೆ ಒಪ್ಪಂದ ಆಗಿತ್ತು. ಈ ಹಿನ್ನೆಲೆ ನಿರುಪಾದಿ ಒಪ್ಪಂದದಂತೆ ಮುಂಗಡವಾಗಿ ಶರಣಪ್ಪಗೆ 3 ಲಕ್ಷ ರೂ. ನೀಡಿದ್ದಾನೆ. ಹಣ ಪಡೆದ ಶರಣಪ್ಪಗೆ ಜಮೀನು ಮಾರಾಟ ಮಾಡದಂತೆ ಮನೆಯಲ್ಲಿ ತಕರಾರು ಮಾಡಿದ್ದರು. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ
Advertisement
Advertisement
ಶರಣಪ್ಪ ಮನೆಯಲ್ಲಿ ತಕರಾರು ಮಾಡಿದ್ದರಿಂದ ನಿರುಪಾದಿಗೆ ಹಣ ವಾಪಸ್ ನೀಡಿದ್ದಾರೆ. ಈ ವೇಳೆ ಹಣ ವಾಪಸ್ ಪಡೆದ ನಿರುಪಾದಿ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದಿದ್ದಾನೆ. ಜಗಳವು ತಾರಕಕ್ಕೇರಿದ್ದು 2 ಗುಂಪುಗಳು ರಾಡು, ಕಟ್ಟಿಗೆಯಿಂದ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಅರೆಸ್ಟ್
Advertisement
Advertisement
ಶರಣಪ್ಪ ಕಡೆಯವರ ಮೇಲೆ ನಿರುಪಾದಿ ಕಡೆಯವರು ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಗಾಯಾಳುಗಳಾದ ಗೋವಿಂದಪ್ಪ, ಶಿವರಾಜ್, ಅಂಬರೀಶ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.