ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ (Prayagraj) ಮಹಾಕುಂಭ (Maha Kumbh Stampede) ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ ಎಂದು ಬೃಹತ್ ಧಾರ್ಮಿಕ ಸಭೆಯ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಡಿಐಜಿ ತಿಳಿಸಿದ್ದಾರೆ.
25 ಶವಗಳನ್ನು ಗುರುತಿಸಲಾಗಿದೆ. ಕಾಲ್ತುಳಿತದಿಂದ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ತಾಯಿ, ಮಗಳು ಸೇರಿ ಬೆಳಗಾವಿಯ ನಾಲ್ವರ ದುರ್ಮರಣ
ಸ್ಥಳೀಯ ವರದಿಗಳು ಮತ್ತು ಪ್ರಯಾಗ್‌ರಾಜ್ ನಿವಾಸಿಗಳು ಕಾಲ್ತುಳಿತದಲ್ಲಿ ಸಾವುಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಸಾವು-ನೋವುಗಳ ಪ್ರಕಟಣೆ ಬಂದಿದೆ. ಆದಾಗ್ಯೂ, ವರದಿಗಳು ಸತ್ತವರ ಸಂಖ್ಯೆಗೆ ಅನುಗುಣವಾಗಿಲ್ಲ.
ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಅನೇಕ ಯಾತ್ರಾರ್ಥಿಗಳ ನಡುವೆ ಜಾಗಕ್ಕಾಗಿ ಮಹಾ ಕುಂಭದ ಸಂಗಮ್ ಪ್ರದೇಶದಲ್ಲಿ ಮುಂಜಾನೆ ನೂಕುನುಗ್ಗಲು ಉಂಟಾಗಿದೆ. ಕಾಲ್ತುಳಿತ ಸಂಭವಿಸುವ ಮೊದಲು ಅನೇಕ ಜನರು ಬ್ಯಾರಿಕೇಡ್‌ಗಳನ್ನು ಒಡೆದು ನುಗ್ಗಿದ್ದಾರೆ. ಪರಿಣಾಮವಾಗಿ ಸಾವು-ನೋವುಗಳಾಗಿವೆ. ಇದನ್ನೂ ಓದಿ: ಕುಂಭಮೇಳದಿಂದ ವಾಪಸ್ ಆಗುವಾಗ ರಸ್ತೆ ಅಪಘಾತ – ಮೈಸೂರಿನ ಇಬ್ಬರು ದುರ್ಮರಣ
ಮಹಾಕುಂಭದಲ್ಲಿ ಸ್ನಾನ ಮಾಡಲು ಬಂದ ಕರ್ನಾಟಕದ ನಿವಾಸಿ ಸರೋಜಿನಿ ಅವರು ಮಾತನಾಡಿದ್ದು, ನಾವು ಎರಡು ಬಸ್‌ಗಳಲ್ಲಿ 60 ಜನರ ಬ್ಯಾಚ್‌ನಲ್ಲಿ ಬಂದಿದ್ದೇವೆ. ನಮ್ಮ ಗುಂಪಿನಲ್ಲಿ ಒಂಬತ್ತು ಜನರಿದ್ದರು. ಇದ್ದಕ್ಕಿದ್ದಂತೆ ಗುಂಪಿನಲ್ಲಿ ತಳ್ಳಾಟವಾಯಿತು. ನಾವು ಕೂಡ ಸಿಕ್ಕಿಬಿದ್ದಿದ್ದೇವೆ ಎಂದು ತಿಳಿಸಿದ್ದಾರೆ.