ರಾಮನಗರ: ಬಡ ಕುಟುಂಬದ ಮಹಿಳೆಯ ಜನ್‍ಧನ್ ಖಾತೆಗೆ 30 ಕೋಟಿ ಹಣ ಜಮೆಯಾಗಿದ್ದು, ಅಷ್ಟೇ ಬೇಗ ಹಣ ಹಿಂದಿರುಗಿದ ಘಟನೆ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಾಲೂಕಿನ ಬಿಡಿ ಕಾಲೂನಿ ನಿವಾಸಿಯಾಗಿರುವ ರೀಹಾನ್ ಬಾನು ಖಾತೆಗೆ ಡಿಸೆಂಬರ್ 5 ರಂದು 30 ಕೋಟಿ ಹಣ ಜಮೆಯಾಗಿದೆ. ಅಲ್ಲದೆ ಅಷ್ಟೇ ವೇಗವಾಗಿ ಹಣ ಹಿಂಪಡೆಯಲಾಗಿದೆ. ರೀಹಾನ್ ಬಾನು ಸೆಪ್ಟೆಂಬರ್ 4 ರಂದು ಆನ್‍ಲೈನ್ ಮೂಲಕ ಸೀರೆವೊಂದನ್ನು ಆರ್ಡರ್ ಮಾಡಿದ್ದಾರೆ. ಕೆಲವು ದಿನಗಳ ನಂತರ ಅದೇ ನಂಬರ್‌ನಿಂದ ಫೋನ್ ಬಂದಿದ್ದು, ನಿಮಗೆ ನಗದು ಬಹುಮಾನ ಬಂದಿದೆ. ನಿಮ್ಮ ಅಕೌಂಟ್ ನಂಬರ್ ನೀಡಿ ಎಂದು ಮಾಹಿತಿ ಕೇಳಿದ್ದಾರೆ.
Advertisement
Advertisement
ಅದರಂತೆಯೇ ರೀಹಾನ್ ಅಕೌಂಟ್ ನಂಬರ್ ನೀಡಿದ್ದಾರೆ. ಆದರೆ ರೀಹಾನ್ ಅಕೌಂಟ್‍ಗೆ ಯಾವುದೇ ಹಣ ಬಂದಿಲ್ಲ. ಬಳಿಕ ಡಿಸೆಂಬರ್ 2 ರಂದು ಚನ್ನಪಟ್ಟಣದ ಎಸ್‍ಬಿಐ ಬ್ಯಾಂಕ್ ಸಹಾಯಕ ಬಂದು 4 ಗಂಟೆ ಸುಮಾರಿಗೆ ಬಂದು ನಿಮ್ಮ ಖಾತೆಗೆ ದೊಡ್ಡ ಮೊತ್ತದ ಹಣ ಬಂದಿದೆ. ನಾಳೆ ನಿಮ್ಮ ಅಧಾರ್ ಕಾರ್ಡ್ ತೆಗೆದುಕೊಂಡು ಬರಲು ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ರೀಹಾನ್ ಬಾನು ಬ್ಯಾಂಕಿಗೆ ತೆರಳಿದ್ದಾರೆ. ಆದರೆ ಅಲ್ಲಿ ಬ್ಯಾಂಕ್ ಮ್ಯಾನೇಜರ್ ನಿಮಗೆ ಯಾವುದೇ ಹಣ ಬಂದಿಲ್ಲವೆಂದು ಜೀರೋಫಾರಂಗೆ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆ.
Advertisement
ಬಳಿಕ ಮೂರು ದಿನ ಬಿಟ್ಟು ರೀಹಾನ್ ಬಾನು ಖಾತೆಗೆ ಡಿಸೆಂಬರ್ 5 ರಂದು 29,99,74,084 ಖಾತೆಗೆ ಜಮೆಯಾಗಿದೆ. ಆದರೆ ಅಷ್ಟೇ ವೇಗವಾಗಿ ಖಾಲಿಯಾಗಿದೆ ಎಂದು ರೀಹಾನ್ ಬಾನು ದೂರಿನಲ್ಲಿ ದಾಖಲಿಸಿದ್ದಾರೆ. ಆದರೆ ಬ್ಯಾಂಕ್ ತನಿಖಾಧಿಕಾರಿಗಳ ತಾಂತ್ರಿಕ ದೊಷದಿಂದಾಗಿ ರೀಹಾನ್ ಬಾನು ಖಾತೆಗೆ 30 ಕೋಟಿ ರೂಪಾಯಿಗಳು ಜಮೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಈ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.