ಕೋವಿಡ್ ನಿರ್ವಹಣೆಯಲ್ಲಿ 30 ಕೋಟಿ ಅಕ್ರಮ – ಬಿಜೆಪಿ ವಿರುದ್ಧ ಯು.ಬಿ ವೆಂಕಟೇಶ್ ಬಾಂಬ್!

Public TV
3 Min Read
ub venkatesh

– ಗೃಹಜ್ಯೋತಿ ಯೋಜನೆಯಿಂದ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಆರ್ಥಿಕ ಸಂಕಷ್ಟ: ಶರವಣ
– ಡೆಂಗ್ಯೂ ಚಿಕಿತ್ಸೆಗೆ ಹೆಚ್ಚು ಹಣ ಪಡೆದರೆ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಗುಂಡೂರಾವ್‌ ವಾರ್ನಿಂಗ್‌

ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನದ (Karnataka Assembly Session) ಮೊದಲ ದಿನವೇ ಅಕ್ರಮಗಳ ಸದ್ದು – ಗದ್ದಲ ಜೋರಾಗಿ ನಡೆದಿದೆ. ವಾಲ್ಮೀಕಿ ನಿಗಮದ ಹಗರಣ ಮುಡಾ ಹಗರಣಗಳ ಪ್ರಸ್ತಾಪದ ನಡುವೆ ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ಹಗರಣಗಳ (Covid Scam) ಬಗ್ಗೆ ಕಾಂಗ್ರೆಸ್ ನಾಯಕ ಯು.ಬಿ ವೆಂಕಟೇಶ್ ದನಿ ಎತ್ತಿದ್ದಾರೆ.

Assembly Session

ಶೂನ್ಯ ವೇಳೆಯಲ್ಲಿ ಮಾತನಾಡಿದ ಯು.ಬಿ ವೆಂಕಟೇಶ್ (UB Venkatesh), ಬೆಂಗಳೂರಿನಲ್ಲಿ 2021-22ರಲ್ಲಿ ಬಿಜೆಪಿ ಸರ್ಕಾರದ ಇದ್ದಾಗ ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ಅಕ್ರಮವಾಗಿದೆ. ಔಷಧಿ ಸೇರಿ ಇನ್ನಿತರ ಖರೀದಿಯಲ್ಲಿ ಅಕ್ರಮವಾಗಿದೆ. ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮದ ಬಗ್ಗೆ ಪ್ರಸ್ತಾಪ ಇದೆ. ಸುಮಾರು 30 ಕೋಟಿ ರೂ. ಅಕ್ರಮದ ಆಗಿದೆ. ಈ ಬಗ್ಗೆ ತನಿಖೆ ಮಾಡಿ ತಪ್ಪು ಮಾಡಿರೋರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಆಗ್ರಹಿಸಿದರು.

GRUHAJYOTHI

ʻಗೃಹಜ್ಯೋತಿʼ ಕರ್ನಾಟಕವನ್ನೇ ಬರ್ಬಾದ್ ಮಾಡುವ ಸ್ಕೀಮ್:
ಇದಕ್ಕೂ ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಶರವಣ ಮಾತನಾಡಿದರು. ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಯಿಂದ (Gruha Jyothi Scheme) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಬಹಳಷ್ಟು ನಷ್ಟದಲ್ಲಿವೆ. ಕರ್ನಾಟಕವನ್ನೇ ಬರ್ಬಾದ್ ಮಾಡುವ ಸ್ಕೀಮ್ ಇದು. ಇದರಿಂದ ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿವೆ. ವಿದ್ಯುತ್ ಉತ್ಪಾದನಾ ಕಂಪನಿಗಳಿಗೂ ಹಣ ಪಾವತಿಯಾಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಕೆ.ಜೆ ಜಾರ್ಜ್, ಯಾವುದೇ ವಿದ್ಯುತ್ ಕಂಪನಿಗಳ ಬಾಕಿ ಹಣ ಉಳಿಸಿಕೊಂಡಿಲ್ಲ. ಗೃಹ ಜ್ಯೋತಿ ಅಡಿ ಉಪಯೋಗ ಮಾಡಿದ್ದ ಎಲ್ಲ ವಿದ್ಯುತ್‌ಗೂ ಹಣ ಕಂಪನಿಗಳಿಗೆ ಈಗಾಗಲೇ ಸಂದಾಯವಾಗಿದೆ ಎಂದು ಸ್ಪಷ್ಟನೆ ನೀಡಿದರು.

Dinesh Gundurao 1

ಡೆಂಗ್ಯೂ ವಿಚಾರದಲ್ಲಿ 2 ತಿಂಗಳು ಎಚ್ಚರವಾಗಿರಿ:
ಇನ್ನೆರಡು ತಿಂಗಳು ಡೆಂಗ್ಯೂ ವಿಚಾರದಲ್ಲಿ ಜನರು ಎಚ್ಚರವಾಗಿ ಇರಬೇಕು ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನರಿಗೆ ಕರೆ ನೀಡಿದರು. ವಿಧಾನ ಪರಿಷತ್ ಕಲಾಪ ಪ್ರಶ್ನೋತ್ತರ ಅವಧಿಯ ವೇಳೆ ಬಿಜೆಪಿಯ ಧನಂಜಯ ಸರ್ಜಿ ಅವರ ಬದಲಾಗಿ, ಅರುಣ್ ಡೆಂಗ್ಯೂ ಬಗ್ಗೆ ಪ್ರಶ್ನೆ ಕೇಳಿದ್ರು.

ಇದಕ್ಕೆ ಉತ್ತರ ನೀಡಿದ ಸಚಿವರು, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಅಂತ ತಿಳಿಸಿದರು.ಈ ವರ್ಷ ನಮ್ಮ ರಾಜ್ಯದಲ್ಲಿ ಡೆಂಗ್ಯೂ ಕೇಸ್ ಜಾಸ್ತಿ ಆಗಿದೆ.ಕಳೆದ ವರ್ಷ ಈ ಅವಧಿಗೆ 25 ಸಾವಿರ ಕೇಸ್ ಇತ್ತು. ಈ ವರ್ಷ ಇಲ್ಲಿವರೆಗೆ 68 ಸಾವಿರ ಕೇಸ್ ಈ ವರೆಗೆ ದಾಖಲಾಗಿದೆ. ಡೆಂಗ್ಯೂವನ್ನ ನಾವು ಗಂಭೀರವಾಗಿ ಪರಿಗಣಿಸಲಾಗಿದೆ. ಸಿಎಂ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಡೆಂಗ್ಯೂವನ್ನ ನೋಟಿಫೈ ಕಾಯಿಲೆ ಅಂತ ಘೋಷಣೆ ಮಾಡಲಾಗಿದೆ. ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಮಾಹಿತಿ ಸರ್ಕಾರಕ್ಕೆ ಕೊಡುವ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.

ಡೆಂಗ್ಯೂ ಚಿಕಿತ್ಸೆಗೆ ಹೆಚ್ಚು ಹಣ ಪಡೆದರೆ ಕ್ರಮ:
ವಿಶೇಷವಾಗಿ ಟಾಸ್ಕ್ ಫೋರ್ಸ್ ನೇಮಕ ಮಾಡಲಾಗಿದೆ ಎಂದರು. ಚಿಕಿತ್ಸೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಡೆಂಗ್ಯೂ ಕಾಯಿಲೆಯನ್ನು ಕೋವಿಡ್ ಮಾದರಿಯಲ್ಲಿ ಮಾನಿಟರ್ ಮಾಡ್ತಿದ್ದೇವೆ. ಒಂದೇ ಏರಿಯಾದಲ್ಲಿ 2-3 ಕೇಸ್ ಬಂದರೆ ಅದನ್ನ ಹಾಟ್ ಸ್ಪಾಟ್ ಅಂತ ಅಂತ ಘೋಷಣೆ ಮಾಡಿ ಇಡೀ ಏರಿಯಾದಲ್ಲಿ ಫೀವರ್ ಕ್ಲಿನಿಕ್ ಓಪನ್ ಮಾಡಿ ತಪಾಸಣೆ ಮಾಡ್ತಿದ್ದೇವೆ. ಇನ್ನು ಎರಡು ತಿಂಗಳು ನಾವು ಎಚ್ಚರಿಕೆಯಿಂದ ಇರಬೇಕು. ಸೆಪ್ಟೆಂಬರ್ ವರೆಗೂ ನಾವು ಎಚ್ಚರಿಕೆಯಿಂದ ಇರಬೇಕು ಅಂತ ಕರೆ ಕೊಟ್ರು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ಉಚಿತ ಪ್ಲೇಟ್ ಲೈಟ್ಸ್ ಕೂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡಲಾಗ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯೂ ಟೆಸ್ಟ್ ಗೆ ದರ ನಿಗದಿ ಮಾಡಲಾಗಿದೆ. ಹೆಚ್ಚು ಹಣ ಪಡೆದ್ರೆ ಕ್ರಮ ತೆಗೆದುಕೊಳ್ತಿದ್ದೇವೆ ಅಂತ ತಿಳಿಸಿದರು.

Share This Article