– ಗ್ರಾಹಕರನ್ನು ಹುಡುಕುತ್ತಿದ್ದ ಆರೋಪಿಗಳು
ರಾಯ್ಪುರ: 30 ಲಕ್ಷ ಮೌಲ್ಯದ ಚಿರತೆ ಮತ್ತು ಜಿಂಕೆ ಚರ್ಮದೊಂದಿಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತಿಸ್‍ಗಡದಲ್ಲಿ ನಡೆದಿದೆ.
Advertisement
ಆರೋಪಿಗಳನ್ನು ಶೇಕ್ ಶಹಬುದ್ಧೀನ್(27) ಬಲಿರಾಮ್ ಬರಿಹಾ(52) ಮತ್ತು ಜೋಹಾನ್ ಬರಿಹಾ(50) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಲೋದಾಬಜಾರ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಈ ಮೂವರು ಭೇಟೆಗಾರರನ್ನು ಮಹಾಸ್‍ಮುಂಡ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಬಲೋದಾಬಜಾರ್‍ನ ಬರ್ನವಾಪರಾ ಅರಣ್ಯ ಪ್ರದೇಶದಲ್ಲಿ ಅವರು ಜಿಂಕೆ ಮತ್ತು ಚಿರತೆಯನ್ನು ಬೇಟೆಯಾಡಿದ್ದಾರೆ. ನಂತರ ಈ ಪ್ರಾಣಿಗಳ ಚರ್ಮವನ್ನು ಮಾರಾಟ ಮಾಡಲು ಆರೋಪಿಗಳು ಗ್ರಾಹಕರನ್ನು ಹುಡುಕುತ್ತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಠಾಕೂರ್ ತಿಳಿಸಿದ್ದಾರೆ.
Advertisement
ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿರತೆ ಚರ್ಮ ಮತ್ತು ಜಿಂಕೆ ಚರ್ಮದ ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 25 ಲಕ್ಷ ದಿಂದ 5 ಲಕ್ಷ ಆಗಿರಬಹುದು. ವನ್ಯಜೀವಿ ಸಂರಕ್ಷಣಾ ಕಾಯ್ದೆ (1972)ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.