ಬೀಜಿಂಗ್: ಎಲ್ಲರಿಗೂ ತಿಳಿದಿರುವಂತೆ ವಿಮಾನಯಾನವು ದುಬಾರಿ ಸಾರಿಗೆ ವ್ಯವಸ್ಥೆಯಾಗಿದೆ. ವಿಮಾನ ಸಂಸ್ಥೆಯು ತನ್ನದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿರುತ್ತದೆ. ಉದಾಹರಣೆ ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್‍ಗಳ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿರುತ್ತದೆ. ಲಗೇಜ್ ಮಿತಿಮೀರಿದರೆ ಯಾವುದೇ ಪ್ರಯಾಣಿಕರಾದರು ಸಹ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಹೆಚ್ಚಿನ ಶುಲ್ಕ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹೋಗಿ ನಾಲ್ವರು ಪ್ರಯಾಣಿಕರು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ.
Advertisement
ಇತ್ತೀಚೆಗೆ 4 ಮಂದಿ ಪ್ರಯಾಣಿಕರು 30 ಕೆಜಿ ಕಿತ್ತಳೆ ಹಣ್ಣಿನ ಡಬ್ಬಗಳ ಲಗೇಜ್‍ಗೆ ಹೆಚ್ಚು ಹಣ ಪಾವತಿಸಬೇಕೆಂದು 30 ಕೆಜಿ ಹಣ್ಣನ್ನು 30 ನಿಮಿಷದಲ್ಲಿ ತಿಂದಿರುವ ಘಟನೆ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‍ನಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.
Advertisement
ವಿಮಾನ ನಿಲ್ದಾಣಕ್ಕೆ 30 ಕೆಜಿ ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಹೋಗಿದ್ದ ವಾಂಗ್ ಮತ್ತು ಆತನ ಸಹೋದ್ಯೋಗಿಗಳು ಕಿತ್ತಳೆ ಹಣ್ಣಿನ ಹೆಚ್ಚುವರಿ ಲಗೇಜ್‍ಗೆ 300 ಯುವಾನ್(3,384 ರೂ) ಶುಲ್ಕ ಪಾವತಿಸಬೇಕೆಂದು ಕಿತ್ತಳೆ ಹಣ್ಣುಗಳನ್ನು ತಿನ್ನಲು ನಿರ್ಧರಿಸಿ, ಕೇವಲ 30 ನಿಮಿಷಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಕಿತ್ತಳೆ ಹಣ್ಣುಗಳನ್ನು ತಿಂದು ಖಾಲಿ ಮಾಡಿದ್ದಾರೆ.
Advertisement
Advertisement
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಒಂದೇ ಬಾರಿಗೆ ಅಧಿಕ ಹಣ್ಣುಗಳನ್ನು ತಿಂದ ಪರಿಣಾಮ ಇದೀಗ 4 ಮಂದಿ ಕೂಡ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಆ ನಾಲ್ವರ ಮೂರ್ಖತನವನ್ನು ನೋಡಿ ವ್ಯಂಗ್ಯ ಮಾಡುತ್ತಿದ್ದಾರೆ.