ಕ್ಯಾನ್ಬೆರಾ: ಒಬ್ಬ ಮನುಷ್ಯ 33 ಹಂತವನ್ನು ಏರಲು ಎಷ್ಟು ಸಮಯ ಬೇಕಾಗುತ್ತದೆ? ಅದರಲ್ಲೂ ಪಾದವನ್ನು ನೆಲಕ್ಕೆ ತಾಕಿಸದೆ ಬೈಸಿಕಲ್ ನಲ್ಲಿ ಮೆಟ್ಟಿಲು ಏರಲು ಸಾಧ್ಯವೇ ಇಲ್ಲ. ಆದರೆ ಫ್ರೆಂಚ್ ಮೂಲದ ಸೈಕಲಿಷ್ಟ್ ಮತ್ತು ಮೌಂಡೆನ್ ಬೈಕರ್ ಯುರೆಲಿಯನ್ ಫಾಂಟೆನಾಯ್ ಎಂಬವನು ಕೇವಲ 30 ನಿಮಿಷಗಳಲ್ಲಿ 768 ಮಟ್ಟಿಲುಗಳನ್ನು ಬೈಸಿಕಲ್ ಮೂಲಕ 33ನೇ ಹಂತ ಏರಿದ್ದಾನೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಪ್ಯೂಟಾಕ್ಸ್ ಟವರ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಗಗನವನ್ನೇ ಚುಂಬಿಸುವಂತಿರುವ ಟ್ರಿನಿಟಿ ಟವರ್ ಕಟ್ಟಡವನ್ನು ತನ್ನ ಪಾದಗಳನ್ನು ನೆಲಕ್ಕೆ ತಾಗಿಸದೇ 33ನೇ ಹಂತ ಬರುವವರೆಗೂ ಬೈಸಿಕಲ್ ನಲ್ಲಿಯೇ ಏರಿದ್ದಾನೆ. ಹೀಗೆ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾನೆ. ಈ ವೀಡಿಯೋ ಇದೀಗ ಟ್ವಿಟ್ಟರ್ ಮತ್ತು ಯುಟ್ಯೂಬ್ ಗಳಲ್ಲಿ ಹರಿದಾಡುತ್ತಿದೆ.
ಈ ವೀಡಿಯೋದಲ್ಲಿ ಯುರೆಲಿಯನ್ ಸವಾಲನ್ನು ಮೊದಲ ಮೆಟ್ಟಿಲಿಂದ ಆರಂಭಿಸಿ, ಅಂಕು ಡೊಂಕಾಗಿರುವ ಮೆಟ್ಟಲಿನ ಮೇಲೆ ನಿಧಾನಗತಿಯಲ್ಲಿ ಬೈಸಿಕಲ್ ಮೂಲಕ 33 ಹಂತದ ಮೆಟ್ಟಿಲುಗಳನ್ನು ಏರುತ್ತಿರುವುದು ಕಂಡು ಬಂದಿದೆ. ಅಲ್ಲದೆ ಸಾರ್ವಜನಿಕರು ಆತನಿಗೆ ಹಿಂದಿನಿಂದ ಚಪ್ಪಾಳೆ ತಟ್ಟಿ ಪ್ರೇರೆಪಿಸುತ್ತಿರುವುದನ್ನು ಕಾಣಬಹುದಾಗಿದೆ.