ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. ಶನಿವಾರ 69,239 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ತನ್ನೆಲ್ಲ ಹಿಂದಿನ ದಾಖಲೆಗಳ ಬ್ರೇಕ್ ಮಾಡಿದೆ. ಕಳೆದ 24 ಗಂಟೆಯಲ್ಲಿ ಕೊರೊನಾದಿಂದಾಗಿ ಒಟ್ಟು 912 ಜನರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 56,706ಕ್ಕೆ ಏರಿಕೆಯಾಗಿದೆ.
ಸದ್ಯ 7,07,668 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 30,44,941ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಗುಣಮುಖ ಪ್ರಮಾಣ ಶೇ.74.89ರಷ್ಟಿದೆ. ಕಳೆದ 15 ದಿನದಲ್ಲಿಯೇ 20 ಲಕ್ಷ ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್ ಮತ್ತು ಅಮೆರಿಕಾದ ನಂತರದ ಸ್ಥಾನಲದಲ್ಲಿಯೇ ಭಾರತ ಇದೆ. ಆಗಸ್ಟ್ 22ರಂದು ಒಟ್ಟು 8,01,147 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.
Advertisement
India's #COVID19 case tally crosses 30 lakh mark with 69,239 fresh cases and 912 deaths in the last 24 hours.
The #COVID19 case tally in the country rises to 30,44,941 including 7,07,668 active cases, 22,80,567 cured/discharged/migrated & 56,706 deaths: Ministry of Health pic.twitter.com/28wnEi7y5n
— ANI (@ANI) August 23, 2020
Advertisement
ಮಹಾರಾಷ್ಟ್ರ (6,71,942), ತಮಿಳುನಾಡು (3,73,410), ಆಂಧ್ರಪ್ರದೇಶ (3,45,216), ಕರ್ನಾಟಕ (2,71,876) ಮತ್ತು ಉತ್ತರ ಪ್ರದೇಶ (1,82,453) ರಾಜ್ಯಗಳು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಐದು ಸ್ಥಾನದಲ್ಲಿವೆ.
Advertisement
The total number of samples tested up to 22nd August is 3,52,92,220 including 8,01,147 samples tested yesterday: Indian Council of Medical Research (ICMR)#COVID19 pic.twitter.com/GpJ7l9hwqQ
— ANI (@ANI) August 23, 2020