– ಓರ್ವ ರೇಪ್ ಮಾಡೋವಾಗ ಮತ್ತೊಬ್ಬ ಕಾಯ್ತಿದ್ದ
– ಬಾಲಕಿಯ ತಾಯಿ ಬಂದು ಕೇಳಿದಾಗ ಘಟನೆ ಬೆಳಕಿಗೆ
ಮುಂಬೈ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಇಬ್ಬರು ನೆರೆಹೊರೆಯವರಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
Advertisement
ಲೈಂಗಿಕ ಅಪರಾಧಗಳಿಗೆ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ನ್ಯಾಯಾಲಯವು 19 ವರ್ಷದ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. 2018 ರಲ್ಲಿ ನೆರೆ ಮನೆಯ 3 ವರ್ಷದ ಬಾಲಕಿಯ ಮೇಲೆ ಈ ಇಬ್ಬರು ಅತ್ಯಾಚಾರ ನಡೆಸಿದ್ದರು. ಈ ಕುರಿತಾಗಿ ತನಿಖೆ ನಡೆಯುತ್ತಿತ್ತು. ಇದೀಗ ಈ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆಯನ್ನು ನಾಯಾಲಯ ವಿಧಿಸಿದೆ.
Advertisement
Advertisement
ಪ್ರಕರಣದ ಹಿನ್ನೆಲೆ:
ಬಾಲಕಿ ಹಾದಿಯಲ್ಲಿ ಆಟವಾಡುತ್ತಿದ್ದಾಗ ಕಾಮುಕರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇಬ್ಬರಲ್ಲಿ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ನಡೆಸುವಾಗ ಮತ್ತೊಬ್ಬ ಕಾವಲು ಕಾಯುತ್ತಾ ನಿಂತಿದ್ದಾನೆ. ಈ ವೇಳೆ ಮಗುವಿನ ತಾಯಿ ಏನು ಮಾಡುತ್ತಿದ್ದಿರಾ ಎಂದು ವಿಚಾರಿಸುತ್ತಾ ಬಂದಾಗ ಅಪ್ರಾಪ್ತೆ ಬಾಲಕಿ ನಡೆದಿರುವ ಘಟನೆಯನ್ನು ವಿವರಿಸಿದ್ದಾಳೆ. ಆಗ ಬಾಲಕಿಯ ಪೋಷಕರು ಸೆವ್ರಿಯಲ್ಲಿರುವ ಆರ್ಎಕೆ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಪೋಲಿಸರು ಈ ಇಬ್ಬರು ಆರೋಪಿಗಳನ್ನು 2018ರಲ್ಲಿಯೇ ಬಂಧಿಸಿದ್ದಾರೆ. ಈ ಕೃತ್ಯಕ್ಕೆ ತನ್ನ ಸ್ನೇಹಿತನನ್ನು ಕೂಡ ಉತ್ತೇಜಿಸಿದ್ದಕ್ಕಾಗಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಆರೋಪಿಗಳನ್ನು ಬಂಧಿಸಿದಾಗಿನಿಂದಲೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಮಗು ಹೇಳಿಕೆ ಮತ್ತು ವೈದ್ಯಕೀಯ ಪುರಾವೆಗಳನ್ನು ಅವಲಂಬಿಸಿ ಶಿಕ್ಷೆ ನೀಡಿದೆ. ಆರೋಪಿಗಳು ತಪ್ಪಿತಸ್ಥರೆಂದು ಒಪ್ಪಿಕೊಂಡಿದ್ದಾರೆ.