ಬೀಜಿಂಗ್: ಚೀನಾ ದೇಶವು 3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊರೊನಾವ್ಯಾಕ್ ಲಸಿಕೆ ನೀಡಲು ಅನುಮತಿ ನೀಡಿದೆ.
ಚೀನಾದ ಸಿನೊವ್ಯಾಕ್ ಕಂಪನಿ ಕೊರೊನಾವ್ಯಾಕ್ ಲಸಿಕೆಯನ್ನು ಕಂಡು ಹಿಡಿದಿದ್ದು, ಮೊದಲಿಗೆ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕ್ಲಿನಿಕಲ್ ಸಂಶೋಧನೆ ನಡೆಸಿ, ಬಳಿಕ 17 ವರ್ಷ ಒಳಗಿನ ನೂರಾರು ಕೊರೊನಾ ವಾರಿಯರ್ಸ್ ಗಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ಸಂದರ್ಭದಲ್ಲಿ ಈ ಲಸಿಕೆ ಸುರಕ್ಷಿತ ಹಾಗೂ ಸೂಕ್ತವಾಗಿದೆ ಎಂದು ಸಿನೊವ್ಯಾಕ್ ಕಂಪನಿ ಅಧ್ಯಕ್ಷ ಯಿನ್ ವಿಯಿಡಾಂಗ್ ಖಚಿತಪಡಿಸಿದ್ದಾರೆ. ಇದನ್ನು ಓದಿ: ಏಲಕ್ಕಿ ಸೇವನೆಯಿಂದ ಸಿಗಲಿದೆ ಹಲವು ಪ್ರಯೋಜನ
Advertisement
Advertisement
ಈ ಮುನ್ನ ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯೂಎಚ್ಒ ಸಿನೋಫಾರ್ಮಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡಿದ್ದ ಚೀನಾ, ಇದೀಗ ಸಿನೊವ್ಯಾಕ್ ಕಂಪನಿಯ ಕೊರೊನಾವ್ಯಾಕ್ ಲಸಿಕೆಗೆ ಅನುಮತಿ ನೀಡಿದೆ. ಅಲ್ಲದೆ ಸಿನೊವ್ಯಾಕ್ ಲಸಿಕೆ ಚೀನಾದ ಎರಡನೇ ವ್ಯಾಕ್ಸಿನ್ ಆಗಿದೆ. ಇದನ್ನು ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ
Advertisement
ರಾಜಕೀಯದ ದೃಷ್ಟಿಯಿಂದ ಚೀನಾ ಸಿನೊವ್ಯಾಕ್ ಲಸಿಕೆಯನ್ನು ಹಲವು ದೇಶಗಳಿಗೆ ದೇಣಿಗೆ ನೀಡುತ್ತಿದೆ.