ಚಾಮರಾಜನಗರ: ಮೂರು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದರ್ಶನವಿಲ್ಲ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಕೊರೊನಾ ಲಾಕ್ಡೌನ್ ಬಳಿಕ ಇತ್ತೀಚೆಗಷ್ಟೆ ದೇವಸ್ಥಾನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಈಗ ಜೂನ್ 19ರಿಂದ 21ರವರೆಗೆ ಮಾದಪ್ಪನ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ದರ್ಶನ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಆದೇಶ ಹೊರಡಸಿದ್ದಾರೆ.
Advertisement
Advertisement
ಜೂನ್ 19ರಂದು ದೇವರಿಗೆ ಎಣ್ಣೆ ಮಜ್ಜನ ಕಾರ್ಯಕ್ರಮವಿದೆ. ಇದರ ಜೊತೆಗೆ 20, 21ರಂದು ಅಮವಾಸ್ಯೆ ಪೂಜೆ ಹಿನ್ನೆಲೆ, ಮಾದಪ್ಪನ ಬೆಟ್ಟಕ್ಕೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕೊರೊನಾ ವಿರುದ್ಧದ ಸಂರಕ್ಷಣಾ ದೃಷ್ಟಿಯಿಂದ ಮೂರು ದಿನಗಳ ದರ್ಶನ ನಿಷೇಧ ಮಾಡಲಾಗಿದೆ. ಸುಮಾರು 50 ಸಾವಿರ ಜನರು ಬೆಟ್ಟಕ್ಕೆ ಬರುವ ನಿರೀಕ್ಷೆ ಇದ್ದು, ಮುಂಜಾಗ್ರತಾ ದೃಷ್ಟಿಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ ಕೊಡದಿರಲೂ ಜಿಲ್ಲಾಡಳಿತದ ನಿರ್ಧಾರ ಮಾಡಿದೆ.