ತಿರುವನಂತಪುರಂ: ಆಟವಾಡುತ್ತಿದ್ದ ಸಂದರ್ಭದಲ್ಲಿ ತಾಯಿ (Mother) ಚಲಾಯಿಸುತ್ತಿದ್ದ ಕಾರು ಮಗಳ ಮೇಲೆ ಹರಿದ ಪರಿಣಾಮ ಬಾಲಕಿ ದುರ್ಮರಣಕ್ಕೀಡಾದ ಘಟನೆ ಕೇರಳದ ಕೋಯಿಕ್ಕೋಡ್ನ ಕೊಡುವಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕಿಯನ್ನು ಮರಿಯಾಮ್ ನಜೀರ್ (3) ಎಂದು ಗುರುತಿಸಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ.
ವರದಿಗಳ ಪ್ರಕಾರ, ಮಗು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಇತ್ತ ತಾಯಿ ಕಾರು (Car) ಚಲಾಯಿಸುತ್ತಿದ್ದರು. ಆದರೆ ಈ ವೇಳೆ ಅವರು ಏಕಾಏಕಿ ಕಾರಿನ ನಿಯಂತ್ರಣ ಕಳೆದುಕೊಂಡರು. ಪರಿಣಾಮ ಕಾರು, ಆಟವಾಡುತ್ತಿದ್ದ ಮಗಳ ಮೇಲೆಯೇ ಹರಿದಿದೆ.
ಕಾರು ಹರಿದಿದ್ದರಿಂದ ಗಂಭೀರ ಗಾಯಗೊಂಡ ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಮಗಳು ಬೆಡ್ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!
ಬಳಿಕ ಬಾಲಕಿಯ ಮೃತದೇಹವನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.