ಹಲವಾರು ವರ್ಷಗಳಿಂದ ಪೈರಸಿ (Piracy) ಹಾವಳಿಗೆ ಚಿತ್ರೋದ್ಯಮ ನಲುಗಿ ಹೋಗಿತ್ತು. ಪೈರಸಿಯನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸರಕಾರಗಳನ್ನು ಚಿತ್ರೋದ್ಯಮ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಪೈರಸಿ ಕಡಿವಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಭಾರೀ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸುವಂತಹ ಬಿಲ್ ಅನ್ನೂ ಪಾಸು ಮಾಡಿದೆ.
Advertisement
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) ಲೋಕಸಭೆಯಲ್ಲಿ ‘ಸಿನಿಮಾಟೋಗ್ರಫಿ ಬಿಲ್ 2023 (Cinematography Bill 2023) ಅನ್ನು ಮಂಡಿಸುವ ವೇಳೆ ಪೈರಸಿ ಮಾಡುವವರಿಗೆ ಇನ್ಮುಂದೆ ಕೋಟಿಗಟ್ಟಲೆ ದಂಡ ಹಾಕಲು ನಿರ್ಧರಿಸಿರುವ ಕುರಿತು ವಿವರಣೆ ನೀಡಿದರು. ಯಾವುದೇ ಸಿನಿಮಾವನ್ನು ಪೈರಸಿ ಮಾಡಿದರೆ, ಸಿನಿಮಾಗೆ ಆದ ಖರ್ಚಿನ ಶೇಕಡಾ 5ರಷ್ಟು ದಂಡ ಹಾಕಲಾಗುವುದು ಎಂದಿದ್ದಾರೆ.
Advertisement
Advertisement
‘ಚಿತ್ರರಂಗದ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುತ್ತಿದ್ದೇವೆ. ಸಿನಿಮಾ ಪೈರಸಿ ಮಾಡಿದರೆ ಭಾರೀ ಮೊತ್ತದ ದಂಡದ ಜೊತೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಲಾಗುವುದು. ಅಲ್ಲದೇ, ಪೈರಸಿ ಮಾಡುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗುವುದು. ಅಲ್ಲದೇ ಸೆನ್ಸಾರ್ (Censorship)ಪತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ’ ಎಂದರು ಅನುರಾಗ್ ಠಾಕೂರ್.
Advertisement
Web Stories