– ಇಂದಿಗೂ ಕಣ್ಣೀರಿಡುತ್ತಿದ್ದಾರೆ ಕುಟುಂಬಸ್ಥರು
ಮಡಿಕೇರಿ: 2015ರಲ್ಲಿ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಂದ್ ಗಲಭೆ ಲಾಠಿಚಾರ್ಜ್‍ಗಳು ನಡೆದು ಹೋಗಿತ್ತು. ಆ ಸಂದರ್ಭದಲ್ಲಿ ಇಬ್ಬರು ಅಮಾಯಕರು ಟಿಪ್ಪು ಜಯಂತಿಗೆ ಬಲಿಯಾದ್ರು. ಕೊಡಗಿನ ಕುಟ್ಟಪ್ಪ ಹಾಗೂ ಶಾವುಲ್ ಹಮ್ಮಿದ್ ಬಲಿಯಾಗಿ 3 ವರ್ಷ ಕಳೆದಿದೆ.
ವಿವಾದಿತ ಟಿಪ್ಪು ಜಯಂತಿ ಗಲಭೆಯಲ್ಲಿ ಕುಟ್ಟಪ್ಪ ಜೀವ ಕಳೆದುಕೊಂಡು ಇಂದಿಗೆ ಮೂರು ವರ್ಷ ಕಳೆಯಿತು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ಕುಟ್ಟಪ್ಪ 2015ರ ನವೆಂಬರ್ 10ಕ್ಕೆ ಮಡಿಕೇರಿಗೆ ಹೋಗಿ ಬರುವುದಾಗಿ ಹೇಳಿ, ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟವರು ವಾಪಸ್ ಬಂದೇ ಇರಲಿಲ್ಲ. ಟಿಪ್ಪು ಜಯಂತಿ ಗಲಭೆಯಲ್ಲಿ ಮೃತಪಟ್ಟಿದ್ದರು.
Advertisement
Advertisement
ಕುಟ್ಟಪ್ಪನನ್ನು ಕಳೆದುಕೊಂಡ ಮನೆಯವರ ದುಃಖ ಇನ್ನೂ ಹಾಗೇ ಇದೆ. ಕುಟ್ಟಪ್ಪ ಮೃತಪಟ್ಟ ನಂತರ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ, ಕೊಡವ ಸಮಾಜ ಮತ್ತು ದಾನಿಗಳಿಂದ 4 ಲಕ್ಷ ರೂಪಾಯಿ ನೆರವು ಬಿಟ್ಟರೆ ಇನ್ನೇನೂ ಬರಲಿಲ್ಲ. ಟಿಪ್ಪು ಜಯಂತಿಯಿಂದ ಇಂದಿಗೂ ಕುಟ್ಟಪ್ಪ ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ. ಕುಮಾರಸ್ವಾಮಿಯವರು ಮನೆಗೆ ಭೇಟಿ ನೀಡಿದ್ದ ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಟಿಪ್ಪು ಜಯಂತಿ ನಿಲ್ಲಿಸೋದಾಗಿ ಭರವಸೆ ನೀಡಿದ್ರು. ಆದ್ರೆ ಈಗ ಅವರು ಮಾತು ತಪ್ಪಿದ್ದಾರೆ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ಕುಟ್ಟಪ್ಪ ಕುಟುಂಬದ ಕಥೆ ಹೀಗಾದ್ರೆ ಇತ್ತ ಟಿಪ್ಪು ಜಯಂತಿ ಹೆಸರಲ್ಲೇ ಸಾವನ್ನಪ್ಪಿದ ವಿರಾಜಪೇಟೆ ತಾಲೂಕಿನ ಸಿದ್ಧಾಪುರದ ಶಾಹುಲ್ ಹಮೀದ್ ಕಥೆ ಇನ್ನೂ ಘೋರ. ಕುಟ್ಟಪ್ಪ ಅವರ ಸಾವಿಗೆ ಪ್ರತೀಕಾರವಾಗಿ ಕೊಲೆಯಾದವರು ಶಾಹುಲ್ ಹಮೀದ್. ಈತ ಟಿಪ್ಪು ಜಯಂತಿ ದಿನವೇ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ನೋಡಿಕೊಂಡು ಮನೆಗೆ ಹಿಂತಿರುಗುತ್ತಿದ್ದ. ಈ ವೇಳೆ ಆತನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಅಂದಿನ ದಿನವನ್ನು ನೆನಪಿಸಿಕೊಂಡು ಶಾಹುಲ್ ತಂದೆ, ನನ್ನ ಮಗನಿಗೆ ಬಂದ ಸಾವು ಯಾರಿಗೂ ಬರಬಾರದು ಅಂತ ಬೇಸರ ವ್ಯಕ್ತಪಡಿಸಿದ್ರು.
Advertisement
ಈ ಮಧ್ಯೆ ಯಾರೇ ಕೂಗಾಡಲಿ ಊರೇ ಹೋರಾಡಲಿ.. ಇಂದು ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಅಂತ ಸರ್ಕಾರ ಹೊರಟಿದೆ. ಬಿಜೆಪಿ ತಡೆಯುತ್ತೇವೆ ಎಂದು ಅಖಾಡಕ್ಕೆ ಇಳಿದಿದೆ. ಒಟ್ಟಾರೆ ಮೇಲ್ಮಟ್ಟದ ರಾಜಕೀಯ ಪರಿಣಾಮಗಳನ್ನಷ್ಟೆ ಮಾನದಂಡ ಮಾಡಿಕೊಂಡವರು ಆಚರಿಸುವ ಜಯಂತಿ ಉಳಿಸಿ ಹೋಗುವ ಕಹಿ ನೆನಪುಗಳು ಹೇಗಿರುತ್ತವೆ ಎಂಬುದಕ್ಕೆ ಈ ವರದಿ ಸಾಕ್ಷಿ ಅಷ್ಟೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews