ಮುಂಬೈ: ಕಾರು ಅಪಘಾತದಲ್ಲಿ ಮೃತಪಟ್ಟ ಮೂರು ವರ್ಷದ ಬಳಿಕ ವ್ಯಕ್ತಿಯೊಬ್ಬರು ತಂದೆಯಾಗಿದ್ದಾರೆ.
ಸುಪ್ರಿಯಾ ಜೈನ್ ನವಜಾತ ಶಿಶುವಿಗೆ ಜನ್ಮಕೊಟ್ಟ ತಾಯಿ, ಗೌರವ್ ಎಸ್, ಮೃತಪಟ್ಟ ತಂದೆ. ಇವರಿಬ್ಬರೂ ಮದುವೆಯಾದ 5 ವರ್ಷಗಳ ಬಳಿಕ 2015 ರಲ್ಲಿ ಮಗುವನ್ನು ಹೊಂದಲು ನಿರ್ಧರಿಸುತ್ತಾರೆ. ಕೆಲಸ ನಿಮಿತ್ತ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಈ ಜೋಡಿಗೆ ಪೋಷಕರಾಗುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಐವಿಎಫ್ (In vitro fertilisation) ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದರು.
Advertisement
Advertisement
ಮಗುವಿನ ವಿಚಾರವಾಗಿ ಗೌರವ್ ಮತ್ತು ಸುಪ್ರಿಯಾ ತಮ್ಮದೇ ಆದ ಪರಿಕಲ್ಪನೆಯನ್ನು ಹೊಂದಿದ್ದರು. 2015ರಲ್ಲಿ ಗೌರವ್ ಅವರಿಗೆ ಹುಬ್ಬಳ್ಳಿಯ ಕಾರಿನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪತಿಯನ್ನು ಕಳೆದುಕೊಂಡ ಸುಪ್ರಿಯಾ ಆರಂಭದಲ್ಲಿ ಬಹಳ ಖಿನ್ನತೆಗೆ ಒಳಗಾಗಿದ್ದರು. ಕೆಲ ದಿನಗಳ ಬಳಿಕ ಅವರು ತನ್ನ ಮತ್ತು ಗೌರವ್ ನಡುವೆ ಮಗು ಪಡೆಯುವ ವಿಚಾರವನ್ನು ನಿರ್ಧರಿಸಿದ್ದೇವು ಅದನ್ನು ನಾವು ಪೂರ್ಣಗೊಳಿಸಲೇ ಬೇಕು ಎಂದು ನಿಶ್ಚಯಿಸಿದ್ದರು. ತನ್ನ ಅಮ್ಮನಿಗೆ ವಿಚಾರ ತಿಳಿಸಿ ಸಂತಸವನ್ನು ನೀಡಬೇಕೆಂದು ತೀರ್ಮಾನ ಸಹ ಮಾಡಿದ್ದರು.
Advertisement
ಸುಪ್ರಿಯಾ ಮೂಲತಃ ಜೈಪುರದವರಾಗಿದ್ದು, ಐವಿಎಫ್‍ಗಾಗಿ ಶೇಖರಿಸಿದ್ದ ಪತಿಯ ವೀರ್ಯದ ಮೂಲಕ ಮಗುವನ್ನು ಹೊಂದಲು ನಿರ್ಧರಿಸಿ ಮುಂಬೈನ ಡಾ.ಫಿರೋಜ್ ಪರಿಖಾರನ್ನು ಭೇಟಿ ಮಾಡಿದರು. ಆದರೆ ಸುಪ್ರಿಯಾ ತಾಯಿಯಾಗುವುದನ್ನು ತನ್ನ ಪೋಷಕರಿಗಾಗಲಿ ಗೌರವ್ ಪೋಷಕರಿಗಾಗಲಿ ತಿಳಿಸಿರಲಿಲ್ಲ ಇದಕ್ಕಾಗಿ ಒಬ್ಬಂಟಿಯಾಗಿ ಪ್ರಯಾಣವನ್ನು ಆರಂಭಿಸಿದರು.
Advertisement
ಸುಪ್ರಿಯಾ ಪತಿಯ ಸಾವಿನ ಅವಘಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದುಃಖಿತರಾದ ಸುಪ್ರಿಯಾರಿಗೆ ಸಹಾಯ ಮಾಡಲು ಫಿರೋಜ್ ಪರಿಖಾ ವೈದ್ಯರ ತಂಡ ನಿರ್ಧರಿಸಿತು. ಈ ಸಂಬಂಧ ಸುಪ್ರಿಯಾರಿಗೆ ಮನೋವೈದ್ಯರಿಂದ ಮಾನಸಿಕವಾಗಿ ಸದೃಢ ಮಾಡಲಾಗಿತ್ತು. ಆದ್ರೆ ಐವಿಎಫ್ ನಲ್ಲಿ ಸಂಗ್ರಹಿಸಿದ್ದ ಪತಿಯ ವೀರ್ಯಾಣುಗಳು ಕೂಡ ಉಪಯೋಗವಾಗಲಿಲ್ಲ. ಕೊನೆಯ ಬಾಡಿಗೆಗೆ ಪಡೆದುಕೊಳ್ಳುವ ಒಂದು ಪ್ರಯತ್ನ ಮಾತ್ರ ಉಳಿದಿತ್ತು ಇಲ್ಲವಾದಲ್ಲಿ ಸುಪ್ರಿಯಾ ಅವರ ವಂಶವಾಹಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು.
ಪ್ರತಿ ವರ್ಷ ಜೈನ್ ಪತಿಯ ಪುಣ್ಯ ತಿಥಿಗಾಗಿ ಬೆಂಗಳೂರು ಬರುತ್ತಿದ್ದರು. ಗೌರವ್ ಮೃತಪಟ್ಟ ಅದೇ ದಿನಾಂಕದಂದು ಸುಪ್ರಿಯಾ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಆದರೆ ಸಂತಸಪಡಲು ಸಾಧ್ಯವಾಗದಿದ್ದರೂ ಗೆಲುವಿನ ನಗೆ ಬೀರಿದ್ದಾರೆ. ಮಗು ನೋಡಲು ಗೌರವನನ್ನೇ ಹೋಲುತ್ತಿದೆ ಎಂದು ನನಗೆ ಅನಿಸುತ್ತಿದೆ. ನಾನು ಮಗುವನ್ನು ಬಯಸುವುದಿಲ್ಲ ಗೌರವನ ಮಗುವನ್ನು ಇಷ್ಟಪಡುತ್ತೇನೆ. ನಮ್ಮ ಒಪ್ಪಂದದ ಪ್ರಕಾರ ಇಂದು ಮಗು ನಮ್ಮದು, ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದೆವು ಎಂದರು. ಹಾಗೂ ನಾನು ಇಂದಿನಿಂದ ಅವರ ಪುಣ್ಯ ತಿಥಿಗೆ ಹೋಗುವಿದಿಲ್ಲವೆಂದು ಸುಪ್ರಿಯಾ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv