ಭುವನೇಶ್ವರ್: 3 ವರ್ಷದ ಬಾಲಕಿ ತನ್ನ ಮೃತ ತಾಯಿಯ ತೋಳುಗಳಲ್ಲಿ ಎರಡು ರಾತ್ರಿಗಳನ್ನು ಕಳೆದ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಸಾಗರ್‌ಪಾಡಾ ಪ್ರದೇಶದ ಶಿವ ದೇವಾಲಯದ ಬಳಿಯ ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ನಡೆದಿದೆ.
ಕುನಿ ನಾಯ್ಕ್ ಮೃತ ಮಹಿಳೆ. ತಾಯಿಯ ಬಾಯಿಯಿಂದ ಕೀಟಗಳು ಹೊರಬರುವುದನ್ನು ಬಾಲಕಿಯು ಗಮನಿಸಿದ್ದು, ಸಹಾಯಕ್ಕಾಗಿ ಅಳುತ್ತಾ ತನ್ನ ನೆರೆಹೊರೆಯವರ ಬಳಿಗೆ ಹೋಗಿದ್ದಾಳೆ. ಅಕ್ಕಪಕ್ಕದವರು ಮೃತಳ ಮನೆಗೆ ಧಾವಿಸಿ ನೋಡಿದಾಗ ಆಕೆ ಶವವಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೋಳಂಗಿರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಲಕಿಯನ್ನು ಚೈಲ್ಡ್ ಲೈನ್ ಮೂಲಕ ಸಮೀಪದ (ಸಿಡಬ್ಲ್ಯುಸಿ) ಮಕ್ಕಳ ಕಲ್ಯಾಣ ಸಮಿತಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇದನ್ನೂ ಓದಿ: ನಾಳೆಯಿಂದ ಜ.4ರ ವರೆಗೆ ರಾತ್ರಿ 10 ಗಂಟೆಯಿಂದ ಎಲ್ಲಾ ಫ್ಲೈಓವರ್ ಕ್ಲೋಸ್: ಕಮಲ್ ಪಂಥ್
Advertisement
Advertisement
ಮೃತ ಮಹಿಳೆಯು ಸಾಗರ್‌ಪಾಡಾ ಪ್ರದೇಶದಲ್ಲಿ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು. ತನ್ನ ಅತ್ತೆ ಮತ್ತು ಪೋಷಕರಿಂದ ಬೇರ್ಪಟ್ಟು, ತನ್ನ ಮೂರು ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು. ಎರಡು ಮೂರು ದಿನಗಳ ಹಿಂದೆ ಕುನಿ ನಾಯ್ಕ್ ಮೃತಪಟ್ಟಿದ್ದಳು. ನೆರೆಹೊರೆಯವರು ನೀರು ಮತ್ತು ಆಹಾರವನ್ನು ತರುವ ಮೊದಲು ಬಾಲಕಿ ಮೂರು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದಳು ಎಂದು ಸದರ್ ಪೊಲೀಸ್‌ನ ಎಸ್‌ಡಿಪಿಒ ತೂಫಾನ್ ಬಾಗ್ ಹೇಳಿದರು. ಇದನ್ನೂ ಓದಿ: ಚರಂಡಿ ಸ್ವಚ್ಛಗೊಳಿಸುವ ವಿಚಾರಕ್ಕೆ ಜಗಳ – ದೆಹಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಗನ ಹತ್ಯೆ
Advertisement
Advertisement
ನಾವು ಬಾಲಕಿಯನ್ನು ರಕ್ಷಿಸಿದ್ದೇವೆ. ಸದ್ಯಕ್ಕೆ ಆಕೆಯನ್ನು ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಇರಿಸಲಾಗಿದ್ದು, ಆಕೆಯ ಸಂಬAಧಿಕರನ್ನು ಸಂಪರ್ಕಿಸಿ ಹಸ್ತಾಂತರಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಚೈಲ್ಡ್ಲೈನ್ ತಂಡದ ಸದಸ್ಯ ಬಿಜಯ್ ಕುಮಾರ್ ಸಾಹು ಹೇಳಿದರು. ಇತ್ತ ಸದರ್ ಪೊಲೀಸರು ಮಹಿಳೆಯ ಕೊಳೆತ ದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.